ಎಗರಿಸಿದ್ದ ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ

Edited By:

Updated on: May 06, 2026 | 11:18 PM

ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪ್ರಿಯಾ ಎಂಬುವವರ ಮಾಂಗಲ್ಯ ಸರ ಕಸಿದುಕೊಂಡಿದ್ದ ಕಳ್ಳರು, ನಂತರ ಅದನ್ನು ಅವರ ಮನೆ ಮುಂದೆಯೇ ಬಿಸಾಡಿ ಹೋಗಿದ್ದಾರೆ. ಕದ್ದ ಸರ ವಾಪಸ್ ಸಿಕ್ಕರೂ, ಪ್ರಿಯಾ ಸಮಾಧಾನಗೊಂಡಿಲ್ಲ. ತನಗೆ ಅನ್ಯಾಯ ಮಾಡಿದ ದುಷ್ಕರ್ಮಿಗಳು ಸಿಕ್ಕಿಬೀಳಬೇಕು, ಬೇರೆಯವರಿಗೆ ಇಂತಹ ಅನುಭವ ಆಗಬಾರದು ಎಂದು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ, ಮೇ 06: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದುಷ್ಕರ್ಮಿಗಳು ತಾವು ಕದ್ದ ಮಾಂಗಲ್ಯ ಸರವನ್ನು ವಾಪಸ್​ ಮನೆ ಮುಂದೆ ಬಿಸಾಕಿ ಹೋಗಿರುವಂತಹ ಘಟನೆ ನಡೆದಿದೆ. ಮನೆ ಮುಂದೆ ಚಿನ್ನದ ಸರ ಕಂಡು ಮಹಿಳೆಗೆ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಕಳೆದುಕೊಂಡಿದ್ದ ಚಿನ್ನದ ಮಾಂಗಲ್ಯ ಸರ ಸಿಕ್ಕರೂ ಮಹಿಳೆಗೆ ಸಮಾಧಾನವಿಲ್ಲ. ಇನ್ನು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಶ್ರೀಮತಿ ಪ್ರಿಯಾ, ದುಷ್ಕರ್ಮಿಗಳು ನನ್ನ ಕೈಗೆ ಸಿಗಬೇಕು, ನಾನು ಅವನಿಗೆ ಹೊಡೆಯಬೇಕು. ನನಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಹೇಳಿದ್ದಾರೆ. ಮೇ 3ರಂದು ಸಂಜೆ ಪ್ರಿಯಾ ಎಂಬುವವರು ತಮ್ಮ ಮನೆಯ ಹೊರಗಿದ್ದ ನೀರಿನ ಸಂಪ್ ಪರಿಶೀಲಿಸಲು ಹೊರಬಂದಿದ್ದರು. ಆ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 06, 2026 11:17 PM
Follow Us
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More