Pradeep Eshwar: ರಾಜಕೀಯ ನಾಯಕತ್ವಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: May 18, 2023 | 11:04 AM

ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ:  ರಾಜಕೀಯ ಕ್ಷೇತ್ರಕ್ಕೆ ತೀರ ಹೊಸಬ, ದೈತ್ಯಸಂಹಾರಿ ಪ್ರದೀಪ್ ಈಶ್ವರ್ (Pradeep Eshwar) ರಾಜಕೀಯಕ್ಕೆ, ರಾಜಕೀಯ ಧುರೀಣತ್ವಕ್ಕೆ ಹೊಸ ಭಾಷ್ಯ ಬರೆಯುವ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯ ವಿಧಾನಸಭಾ ಚುನಾವಣೆ (assembly polls) ಫಲಿತಾಂಶ ಪ್ರಕಟವಾಗಿ ಇಂದಿಗೆ ಕೇವಲ 5 ನೇ ದಿನ. ಆದರೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಹೆವಿವೇಟ್ ಅನಿಸಿದ್ದ ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಸ್ಟಾರ್ ಪ್ರಚಾರಕರ ನೆರವಿಲ್ಲದೆ ಸೋಲಿಸಿ ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಆಗಲೇ ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಹಿಂದೂ-ಮುಸಲ್ಮಾನರೆನ್ನದೆ ಎಲ್ಲರ ಮನೆಗಳಿಗೆ ಭೇಟಿ ನೋಡಿ ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ. ಅಸಲು ರಾಜಕೀಯ ನಾಯಕತ್ವ ಅಂದರೆ ಇದೇ ಅಲ್ಲವೇ? ಪ್ರದೀಪ್ ಈಶ್ವರ್ ನಮ್ಮೆಲ್ಲರ ಅಭಿನಂದನೆಗೆ ಅರ್ಹರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 18, 2023 10:34 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.