ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಮಹಿಳೆ

Edited By:

Updated on: Oct 04, 2026 | 7:09 PM

ಮುಖ್ಯಾಂಶಗಳು

  • ಶೌಚಾಲಯಕ್ಕಾಗಿ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಮಹಿಳೆ
  • ನಿನ್ನೆ ಶೃಂಗೇರಿಯಲ್ಲಿ ನಡೆದ ಘಟನೆ
  • ತುಂಬಿದ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮುಂದೆ ಮಹಿಳೆ ಗೋಳಾಟ

ಶೃಂಗೇರಿಯಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರಿಗೆ ಅಧಿಕಾರಿಗಳು ಜಾತಿ ಕೇಳಿ ತಾರತಮ್ಯ ಎಸಗಿದ್ದಾರೆ. ನಾನು ಬ್ರಾಹ್ಮಣ ಎಂದು ಹೇಳಿದಾಗ, ಅಧಿಕಾರಿಗಳ ಉದಾಸೀನತೆಗೆ ಮಹಿಳೆ ಕಣ್ಣೀರಿಟ್ಟರು. 8 ವರ್ಷದ ಮಗುವಿನೊಂದಿಗೆ ಶೌಚಾಲಯವಿಲ್ಲದೆ ಪರದಾಡುತ್ತಿರುವ ಮಹಿಳೆ ಶಾಸಕ ಟಿ.ಡಿ. ರಾಜೇಗೌಡರ ಮುಂದೆಯೇ ಗೋಳಾಡಿದರು.

ಚಿಕ್ಕಮಗಳೂರು, ಅಕ್ಟೋಬರ್​​ 04: ಜಿಲ್ಲೆಯ ಶೃಂಗೇರಿಯಲ್ಲಿ ನಿನ್ನೆ ನಡೆದಿದ್ದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಶಾಸಕ ಟಿ.ಡಿ. ರಾಜೇಗೌಡ ಎದುರು ಕಣ್ಣೀರಿಟ್ಟು ಗೋಳಾಡಿದ್ದಾರೆ.  ಶೌಚಾಲಯ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ಅಧಿಕಾರಿಗಳು ‘ನೀವು ಎಸ್‌ಸಿ-ಎಸ್‌ಟಿಗೆ ಬರುತ್ತೀರಾ? ಬಂದರೆ ಏನಾದರೂ ಮಾಡಬಹುದು’ ಎಂದು ಜಾತಿ ಪ್ರಸ್ತಾಪಿಸಿದ್ದು, ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳೆಂದು ತಿಳಿಸಿದಾಗ ಅಧಿಕಾರಿಗಳು ತೋರಿದ ನಿಲುವಿನಿಂದ ನೊಂದಿರುವುದಾಗಿ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಎಂಟು ವರ್ಷದ ಮಗುವನ್ನು ಇಟ್ಟುಕೊಂಡು ಶೌಚಾಲಯವಿಲ್ಲದೆ ತೀವ್ರವಾಗಿ ಪರದಾಡುತ್ತಿದ್ದು, ಅರ್ಜಿ ಹಿಡಿದು ಅಧಿಕಾರಿಗಳ ಬಳಿ ಅಲೆದಾಡಿ ಬೇಸತ್ತ ಮಹಿಳೆ ಶೌಚಾಲಯ ಒದಗಿಸಿಕೊಡುವಂತೆ ಶಾಸಕರ ಸಮ್ಮುಖದಲ್ಲೇ ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More