ನಾಯಿ – ನಾಗರ ಹಾವಿನ ಮಧ್ಯೆ ಬಿಗ್ ಫೈಟ್: ಸಾವನ್ನಪ್ಪಿದ ಹಾವು, ನಾಯಿ ಸ್ಥಿತಿ ಏನಾಯಿತು ನೋಡಿ?
ಚಿಕ್ಕಮಗಳೂರಿನ ಇಟ್ಟಿಗೆ ಗ್ರಾಮದಲ್ಲಿ ರಾಟ್ ವಿಲರ್ ನಾಯಿ ಹಾಗೂ ನಾಗರಹಾವಿನ ನಡುವೆ ಭೀಕರ ಹೋರಾಟ ನಡೆಯಿತು. ಒಂದು ಗಂಟೆ ಕಾಲ ನಡೆದ ಈ ಕದನದಲ್ಲಿ ಎರಡೂ ಸಾವನ್ನಪ್ಪಿದವು. ನಾಯಿ ಹಾವನ್ನು ಕೊಂದರೂ, ವಿಷದ ಕಡಿತದಿಂದ ಅಸುನೀಗಿತು. ಸಾಕು ಪ್ರಾಣಿಗಳು ಮತ್ತು ಹಾವುಗಳ ಸಾವಿಗೆ ಗ್ರಾಮಸ್ಥರು ದುಃಖಿತರಾಗಿದ್ದು, ನಾಗರಹಾವಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಘಟನೆ ಸ್ಥಳೀಯರಲ್ಲಿ ನೋವುಂಟುಮಾಡಿದೆ.
ಚಿಕ್ಕಮಗಳೂರು, ಜ.17: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಸಾಕು ನಾಯಿ ಹಾಗೂ ನಾಗರಹಾವಿನ ನಡುವೆ ಬಿಗ್ ಫೈಟ್ ನಡೆದಿದೆ. ರಾಟ್ ವಿಲರ್ ನಾಯಿ ನಾಗರಹಾವಿನ ಜೊತೆ ಒಂದು ಗಂಟೆ ಫೈಟ್ ಮಾಡಿದೆ. ಆದರೆ ಈ ಜಗಳದಲ್ಲಿ ನಾಗರಹಾವು ಹಾಗೂ ರಾಟ್ ವಿಲರ್ ಶ್ವಾನ ಸಾವನ್ನಪ್ಪಿದೆ. ಈ ಶ್ವಾನ ಮೊದಲು ನಾಗರ ಹಾವನ್ನು ಸಾಯಿಸಿ, ನಂತರ ತನ್ನ ಗೂಡಿಗೆ ಹೋಗಿ ಸಾವನ್ನಪ್ಪಿದೆ. ನಾಗರಹಾವು ಕಚ್ಚಿದರಿಂದ ಶ್ವಾನ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಸಾಕಿದ ಶ್ವಾನ ಹಾಗೂ ನಾಗರಹಾವು ಸಾವನ್ನಪ್ಪಿದ್ದರಿಂದ ಸ್ಥಳೀಯರಿಗೆ ಬೇಸರ ಉಂಟಾಗಿದೆ. ಗ್ರಾಮಸ್ಥರು ನಾಗಹಾವಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ