ಅಸ್ಸಾಂನ ಸಾಂಪ್ರದಾಯಿಕ ಸೆರ್ಜಾ ವಾದ್ಯ ನುಡಿಸಿದ ಪ್ರಧಾನಿ ಮೋದಿ
"ನಾನು ಅಸ್ಸಾಂಗೆ ಭೇಟಿ ನೀಡಿದಷ್ಟು ಬೇರೆ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ. ಅಸ್ಸಾಂನ ಸಂಸ್ಕೃತಿಯನ್ನು ಜಾಗತಿಕವಾಗಿ ಗುರುತಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದ ಮೋದಿ ಬಾಗೂರುಂಬಾ ನೃತ್ಯದ ಅಪಾರ ಸಾಂಸ್ಕೃತಿಕ ಮಹತ್ವವನ್ನು ಶ್ಲಾಘಿಸಿದರು. ಈ ಪ್ರದರ್ಶನವು ಬೋಡೋ ಸಮುದಾಯದ ಸಂಪ್ರದಾಯಗಳು, ಮೌಲ್ಯಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಗುವಾಹಟಿ, ಜನವರಿ 17: ಅಸ್ಸಾಂನ ಗುವಾಹಟಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಸಂಸ್ಕೃತಿಗೆ ಜಾಗತಿಕ ಮನ್ನಣೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಈ ವೇಳೆ ಅಸ್ಸಾಂ ಜನರಿಗೆ ಪ್ರಧಾನಿ ಮೋದಿಗೆ (PM Modi in Guwahati) ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಸ್ಸಾಂನ ಬಗುರುಂಬಾ ದ್ವೌ 2026 ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಗೆ ಬೋಡೋ ಸಮುದಾಯದ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಸೆರ್ಜಾವನ್ನು ನೀಡಲಾಯಿತು. ಈ ವೇಳೆ ಅದನ್ನು ಹೇಗೆ ನುಡಿಸುವುದೆಂದು ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ ಆ ವಾದ್ಯವನ್ನು ನುಡಿಸಿದರು. ಇದಕ್ಕೆ ಸಾವಿರಾರು ಕಲಾವಿದರಿಂದ ಭಾರೀ ಚಪ್ಪಾಳೆ ದೊರಕಿತು.
“2020ರ ಬೋರೋ ಶಾಂತಿ ಒಪ್ಪಂದವು ಶಾಶ್ವತ ಶಾಂತಿಯನ್ನು ತರುವಲ್ಲಿ ಸಹಾಯ ಮಾಡಿದೆ ಮತ್ತು ಅಸ್ಸಾಂನಲ್ಲಿ ಸಂಗೀತ ವಾದ್ಯಗಳ ಶಬ್ದವನ್ನು ಗುಂಡಿನ ಶಬ್ದವು ಬದಲಾಯಿಸಿದೆ. ನಾನು ಅಸ್ಸಾಮಿ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿದರೆ ಅಥವಾ ನನ್ನೊಂದಿಗೆ ಗಮೋಚಾ ಹೊಂದಿದ್ದರೆ, ಕಾಂಗ್ರೆಸ್ ನನ್ನನ್ನು ಗೇಲಿ ಮಾಡುತ್ತದೆ. ಅಸ್ಸಾಂಗೆ ಆಗಾಗ ಭೇಟಿ ನೀಡುವ, ರಾಜ್ಯದ ಅಭಿವೃದ್ಧಿಗೆ ಬದ್ಧತೆಯನ್ನು ತೋರಿಸುವ ಏಕೈಕ ಪ್ರಧಾನಿ ನಾನು ಎಂದು ಪ್ರಧಾನಿ ಮೋದಿ ಹೇಳಿದರು.
“ನಾನು ಅಸ್ಸಾಂಗೆ ಭೇಟಿ ನೀಡಿದಷ್ಟು ಬೇರೆ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ. ಅಸ್ಸಾಂನ ಸಂಸ್ಕೃತಿಯನ್ನು ಜಾಗತಿಕವಾಗಿ ಗುರುತಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದ ಮೋದಿ ಬಾಗೂರುಂಬಾ ನೃತ್ಯದ ಅಪಾರ ಸಾಂಸ್ಕೃತಿಕ ಮಹತ್ವವನ್ನು ಶ್ಲಾಘಿಸಿದರು. ಈ ಪ್ರದರ್ಶನವು ಬೋಡೋ ಸಮುದಾಯದ ಸಂಪ್ರದಾಯಗಳು, ಮೌಲ್ಯಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

