PM Modi in Assam: ಗುವಾಹಟಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ತಮ್ಮ 2 ದಿನಗಳ ಪ್ರವಾಸದಲ್ಲಿ ಅವರು ಸುಮಾರು 7,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಲ್‌ಜಿಬಿಐಎ) ಹೊರಗಿನ ರಾಷ್ಟ್ರೀಯ ಹೆದ್ದಾರಿ-17 ರ ಸುತ್ತಿನಿಂದ ರೋಡ್ ಶೋ ಪ್ರಾರಂಭವಾಗಿ ಸುಮಾರು 4 ಕಿಲೋಮೀಟರ್ ದೂರ ನಡೆಯಿತು. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ರೋಡ್ ಶೋ ಸಮಯದಲ್ಲಿ ಮೋದಿ ಅವರೊಂದಿಗೆ ಇದ್ದರು.
ಗುವಾಹಟಿ, ಜನವರಿ 17: ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸಂಜೆ ಗುವಾಹಟಿಯಲ್ಲಿ ವರ್ಣರಂಜಿತ ರೋಡ್ ಶೋನಲ್ಲಿ ಭಾಗವಹಿಸಿದರು. ಎರಡು ದಿನಗಳ ಅಸ್ಸಾಂ ಪ್ರವಾಸದ ಮೊದಲ ದಿನವಾದ ಇಂದು ಅಸ್ಸಾಂನ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯಗಳನ್ನು ಮೋದಿ ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ತಮ್ಮ 2 ದಿನಗಳ ಪ್ರವಾಸದಲ್ಲಿ ಅವರು ಸುಮಾರು 7,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಲ್‌ಜಿಬಿಐಎ) ಹೊರಗಿನ ರಾಷ್ಟ್ರೀಯ ಹೆದ್ದಾರಿ-17 ರ ಸುತ್ತಿನಿಂದ ರೋಡ್ ಶೋ ಪ್ರಾರಂಭವಾಗಿ ಸುಮಾರು 4 ಕಿಲೋಮೀಟರ್ ದೂರ ನಡೆಯಿತು. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ರೋಡ್ ಶೋ ಸಮಯದಲ್ಲಿ ಮೋದಿ ಅವರೊಂದಿಗೆ ಇದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ