ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ
ಗುವಾಹಟಿಯ ಸರೋಸ್ಜೈ ಪ್ರದೇಶದ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. 23 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 8,000 ನೃತ್ಯಗಾರರು ಸೇರಿದಂತೆ 10,000 ಕ್ಕೂ ಹೆಚ್ಚು ಕಲಾವಿದರು ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿ ಮಾತ್ರವಲ್ಲದೆ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇತರ ನಾಯಕರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಗುವಾಹಟಿ, ಜನವರಿ 17: ಅಸ್ಸಾಂನಲ್ಲಿ ಬೋಡೋ ಸಮುದಾಯದ ಸಾಂಪ್ರದಾಯಿಕ ಬಾಗುರುಂಬಾ ನೃತ್ಯವು ಜಾಗತಿಕವಾದ ಇತಿಹಾಸ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಎದುರು ಇಂದು ರಾತ್ರಿ ಸುಮಾರು 10,000 ಕಲಾವಿದರು ಬಾಗುರುಂಬಾ ನೃತ್ಯ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಆಗಮಿಸಿದ್ದಾರೆ. ಗುವಾಹಟಿಯ ಸರೋಷ್‌ಜೈತ್‌ನಲ್ಲಿ ನಡೆದ ಐತಿಹಾಸಿಕ ಬಾಗ್ರುಂಬಾ ನೃತ್ಯವನ್ನು ಇಡೀ ಜಗತ್ತು ವೀಕ್ಷಿಸಿತು. ಪ್ರಧಾನಿ ಮೋದಿ ಮಾತ್ರವಲ್ಲದೆ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇತರ ನಾಯಕರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಗುವಾಹಟಿಯ ಸರೋಸ್ಜೈ ಪ್ರದೇಶದ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. 23 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 8,000 ನೃತ್ಯಗಾರರು ಸೇರಿದಂತೆ 10,000 ಕ್ಕೂ ಹೆಚ್ಚು ಕಲಾವಿದರು ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

