ನಟ ಯಶ್​ ನೀಡಿದ ಬೆಂಬಲವನ್ನು ನೆನೆದ ‘ಉಪಾಧ್ಯಕ್ಷ’ ಚಿಕ್ಕಣ್ಣ

Updated on: Feb 07, 2024 | 11:18 PM

Yash: ಮೊದಲ ಬಾರಿಗೆ ಚಿಕ್ಕಣ್ಣ ನಾಯಕನಾಗಿ ನಟಿಸಿದ್ದ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಸಿನಿಮಾಕ್ಕೆ ಯಶ್ ನೀಡಿದ ಬೆಂಬಲವನ್ನು ಚಿಕ್ಕಣ್ಣ ನೆನಪಿಸಿಕೊಂಡು ಧನ್ಯವಾದ ಹೇಳಿದ್ದಾರೆ.

ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ (Upadyaksha) ಸಿನಿಮಾ ಹಿಟ್ ಎನಿಸಿಕೊಂಡಿದೆ. ಆ ಮೂಲಕ ಮೊದಲ ಪ್ರಯತ್ನದಲ್ಲಿಯೇ ಚಿಕ್ಕಣ್ಣ ಸಿಕ್ಸರ್ ಹೊಡೆದಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರು ಬೆಂಬಲ ನೀಡಿದ್ದರು. ‘ಉಪಾಧ್ಯಕ್ಷ’ ಸಿನಿಮಾದ ಸಕ್ಸಸ್ ಮೀಟ್​ನಲ್ಲಿ ಮಾತನಾಡಿದ ನಟ ಚಿಕ್ಕಣ್ಣ ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ನಟ ಯಶ್ ನೀಡಿದ ಬೆಂಬಲದ ಬಗ್ಗೆ ಮಾತನಾಡಿದ ಚಿಕ್ಕಣ್ಣ, ‘ಭಾಯ್, ಯಾರ ಕೈಗೂ ಸಿಗಲ್ಲ. ಆದರೆ ನಮಗೆ ಬೆಂಬಲ ನೀಡಿದರು. ಸಿನಿಮಾದ ಚಿತ್ರಕತೆ ಹಂತದಿಂದಲೂ ಜೊತೆಗಿದ್ದರು, ಕೆಲವು ಬದಲಾವಣೆಗಳನ್ನು ಸೂಚಿಸಿದರು. ಸಿನಿಮಾ ಬಿಡುಗಡೆ ದಿನ ಮನೆಗೆ ಕರೆಸಿ ಶುಭ ಹಾರೈಸಿದರು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More