Chikmagalur: ಯುಗಾದಿ ಹಬ್ಬದ ನೆಪದಲ್ಲಿ ಕ್ಷೇತ್ರದ ಜನರಿಗೆ ಅಗತ್ಯ ಸಾಮಗ್ರಿಗಳ ಉಡುಗೊರೆ ಕಳಿಸಿದ ಶಾಸಕ ಸಿಟಿ ರವಿ
ಬ್ಯಾಗು ನಗರ ಸಭೆಯ ಮಾಜಿ ಅಧ್ಯಕ್ಷ ನಟರಾಜ್ ಹೆಸರಲ್ಲಿದ್ದರೆ ಅದರ ಮೇಲೆ ಫೋಟೋ ರವಿಯವರದ್ದಿದೆ, ಬಿಜೆಪಿಯೇ ಭರವಸೆ ಅಂತ ಬ್ಯಾಗ್ ಮೇಲೆ ಮುದ್ರಿಸಲಾಗಿದೆ.
ಚಿಕ್ಕಮಗಳೂರು: ಮೊನ್ನೆಯಷ್ಟೇ ನಾವು ಸಿಟಿ ರವಿ (CT Ravi) ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಉಡುಗೊರೆ ರೂಪದಲ್ಲಿ ಕಳಿಸಿದ ಸೇರೆಗಳನ್ನು ಬಹಿರಂಗವಾಗಿ ಸುಟ್ಟು ಹಾಕಿದ ವಿಡಿಯೋವನ್ನು ನಿಮಗೆ ತೋರಿಸಲಾಗಿತ್ತು. ಮುಂದಿನವಾರ ಬರಲಿರುವ ಯುಗಾದಿ ಹಬ್ಬದ (Ugadi Festival) ನೆಪದಲ್ಲಿ ಶಾಸಕರು ಕ್ಷೇತ್ರದ ಜನರಿಗೆ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದು ಬ್ಯಾಗಲ್ಲಿ ಹಾಕಿ ಮನೆಮನೆಗೆ ಕಳಿಸುತ್ತಿದ್ದಾರೆ. ಬ್ಯಾಗು ನಗರ ಸಭೆಯ ಮಾಜಿ ಅಧ್ಯಕ್ಷ ನಟರಾಜ್ (Nataraj) ಹೆಸರಲ್ಲಿದ್ದರೆ ಅದರ ಮೇಲೆ ಫೋಟೋ ರವಿಯವರದ್ದಿದೆ. ಬ್ಯಾಗಲ್ಲಿ ಸೀರೆಯ ಪ್ಯಾಕೆಟ್, ಅಕ್ಕಿ, ಬೆಲ್ಲ-ಬೇವು, ಕಳ್ಳೆಬೀಜ, ಅಡುಗೆ ಎಣ್ಣೆ ಪ್ಯಾಕೆಟ್ ಬೇಳೆ, ಮಸಾಲೆ ಪದಾರ್ಥ ಮೊದಲಾದವಿವೆ. ಬಿಜೆಪಿಯೇ ಭರವಸೆ ಅಂತಲೂ ಬ್ಯಾಗ್ ಮೇಲೆ ಮುದ್ರಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ