ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ರೈಲು ಸಂಚಾರ ಆರಂಭಗೊಂಡಿದೆ. ಸಚಿವ ವಿ. ಸೋಮಣ್ಣ ರೈಲಿಗೆ ಚಾಲನೆ ನೀಡಿದರು. 85 ವರ್ಷದ ವೃದ್ಧೆ ಲಕ್ಷ್ಮೀ ಅವರು ರೈಲಿಗೆ ನಮಸ್ಕರಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು. ಅವರು ತಿರುಪತಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ ಮತ್ತು ಈ ಹೊಸ ರೈಲು ಸೇವೆಯಿಂದ ತಮ್ಮ ಪ್ರಯಾಣ ಅನುಕೂಲವಾಗಿದೆ ಎಂದರು. ಈ ಹೊಸ ರೈಲು ಸೇವೆಯು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.
ಚಿಕ್ಕಮಗಳೂರು, ಜುಲೈ 11: ಚಿಕ್ಕಮಗಳೂರು -ತಿರುಪತಿ ರೈಲು ಸೇವೆ ಇಂದಿನಿಂದ ಶುಕ್ರವಾರ (ಜು.11) ಆರಂಭವಾಗಿದೆ. ಸಚಿವ ವಿ ಸೋಮಣ್ಣ ರೈಲಿಗೆ ಚಾಲನೆ ನೀಡಿದರು. ಈ ವೇಳೆ 85 ವರ್ಷದ ವೃದ್ಧೆ ಲಕ್ಷ್ಮೀ ಎಂಬುವರು ರೈಲಿಗೆ ನಮಸ್ಕರಿಸಿದರು. ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೃದ್ಧೆ ಲಕ್ಷ್ಮೀ, “ನಾನು ಐದು ಬಾರಿ ತಿರುಪತಿಗೆ ಹೋಗಿದ್ದೇನೆ. ಆದರೆ, ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆ ಆರಂಭವಾಗುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ನನ್ನ ಮಗ ಯೋಧ. ನನ್ನನ್ನು ರೈಲಿನಲ್ಲಿ ದೇಶ ಸುತ್ತಿಸಿದ್ದಾನೆ. ತಿರುಪತಿಗೆ ನಾನು ರೈಲಿನಲ್ಲಿ ಒಂದು ತಿಂಗಳು ಬಿಟ್ಟು ಹೋಗುತ್ತೇನೆ. ರೈಲು ಬಂದಿದ್ದು ಅನುಕೂಲವಾಯಿತು” ಎಂದರು.
ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್: ಕರ್ನಾಟಕದಿಂದ ನೂತನ ರೈಲು, ಇಲ್ಲಿದೆ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ