ಚಿತ್ರದುರ್ಗ: ಹತ್ತು ತಿಂಗಳಿಂದ ಕಟ್ಟದ ಬಾಡಿಗೆ, ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಸಿಬ್ಬಂದಿಗೆ ರಸ್ತೆಯಲ್ಲಿ ನಿಲ್ಲುವ ಸ್ಥಿತಿ!

|

Updated on: Sep 08, 2023 | 10:41 AM

ಇದು ಲಕ್ಷ್ಮಿ ಹೆಬ್ಬಾಳ್ಕರ್ ಸಚಿವರಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿ ಮತ್ತು ಉಡಾಫೆ ಮನೋಭಾವದ ಪರಮಾವಧಿ ಅಂದರೆ ತಪ್ಪಲ್ಲ. ಇಲಾಖೆಯ ಚಿತ್ರದುರ್ಗ ಅಧಿಕಾರಿಗಳನ್ನು ಸಚಿವೆ ಹೆಬ್ಬಾಳ್ಕರ್ ಕೂಡಲೇ ಪ್ರಶ್ನಿಸಿ ಮಕ್ಕಳ ಮತ್ತು ಸಿಬ್ಬಂದಿಯ ತೊಂದರೆ ನಿವಾರಿಸಬೇಕು.

ಚಿತ್ರದುರ್ಗ: ಇದೊಂದು ಅಸಹನೀಯ ದೃಶ್ಯ, ಯಾರೋ ಮಾಡಿದ ತಪ್ಪಿಗೆ ಚಿಕ್ಕ ಚಿಕ್ಕ ಮಕ್ಕಳು ತೊಂದರೆ ಅನುಭವಿಸುವ ಸ್ಥಿತಿ. ಜಿಲ್ಲೆಯ ಹೊಸದುರ್ಗ ಪಟ್ಟಣದ (Hosadurga Town) 17ನೇ ವಾರ್ಡ್ ನಲ್ಲಿನ ಬಾಡಿಗೆ ಕಟ್ಟಡವೊಂದರಲ್ಲಿ ಅಂಗನವಾಡಿ ಕೇಂದ್ರವನ್ನು (Anganwadi centre) ನಡೆಸಲಾಗುತ್ತದೆ. ಸಮಸ್ಯೆ ಎದುರಾಗಿರೋದು ಕಟ್ಟಡದ ಬಾಡಿಗೆ ಕಟ್ಟದ (rental payment) ವಿಷಯದಲ್ಲಿ. ಲಭ್ಯವಿರುವ ಮಾಹಿತಿಯ ಪ್ರಕಾರ ಕಳೆದ 10 ತಿಂಗಳಿಂದ ಕಟ್ಟಡದ ಬಾಡಿಗೆ ಪಾವತಿಸಿಲ್ಲ. ತಾಳ್ಮೆ ಕಳೆದುಕೊಂಡ ಸಾದಿಕ್ ಹೆಸರಿನ ಮಾಲೀಕ ಇಂದು ಬೆಳಗ್ಗೆ ಅದಕ್ಕೆ ಬೀಗ ಜಡಿದಿದ್ದಾರೆ. ಎಂದಿನಂತೆ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಬಂದ ಸಿಬ್ಬಂದಿ ಮತ್ತು ಮಕ್ಕಳು ಕೇಂದ್ರದ ಹೊರಗಡೆ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಚಿವರಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿ ಮತ್ತು ಉಡಾಫೆ ಮನೋಭಾವದ ಪರಮಾವಧಿ ಅಂದರೆ ತಪ್ಪಲ್ಲ. ಇಲಾಖೆಯ ಚಿತ್ರದುರ್ಗ ಅಧಿಕಾರಿಗಳನ್ನು ಸಚಿವೆ ಹೆಬ್ಬಾಳ್ಕರ್ ಕೂಡಲೇ ಪ್ರಶ್ನಿಸಿ ಮಕ್ಕಳ ಮತ್ತು ಸಿಬ್ಬಂದಿಯ ತೊಂದರೆ ನಿವಾರಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on