ಹೊಳೆನರಸೀಪುರ: ಖಬರಸ್ತಾನದಲ್ಲಿ ಸಮಾಧಿ ಮುಂದೆ ಜೀವಂತ ವ್ಯಕ್ತಿಗಳ ಫೋಟೋ ಇಟ್ಟು ಮಾಟ ಮಂತ್ರ
Cemetery Superstitions: ಕಳೆದ ಅರೇಳು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಜಾಗದಲ್ಲಿ ಈ ಮಾಟಮಂತ್ರ ನಡೆದಿರುವುದು ಆತಂಕಕಾರಿಯಾಗಿದೆ. ಆ ವ್ಯಕ್ತಿಯ ಸಮಾಧಿಯನ್ನು ಅಗೆದು ಮಣ್ಣಿನೊಳಗೆ ಹೂತಿಟ್ಟು, ಮಾಟಗಾರರು ಮಾಟ ಮಂತ್ರ ಮಾಡಿಸಿದ್ದಾರೆ. ದೃಶ್ಯಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ, ಸೆಪ್ಟೆಂಬರ್ 8: ಸ್ಮಶಾನದಲ್ಲಿ ಸಮಾಧಿ ಮುಂದೆ ಜೀವಂತ ಇರುವ ವ್ಯಕ್ತಿಗಳ ಫೋಟೋ ಇಟ್ಟು ಮಾಟ ಮಂತ್ರ ನಡೆಸಿರುವ ದೃಶ್ಯಗಳು ಕಂಡುಬಂದಿವೆ. ಜೀವಂತ ಇರೋ ಮಹಿಳೆಯರು ಹಾಗೂ ಪುರುಷರ ಪೋಟೋಗಳು ಸ್ಮಶಾನದಲ್ಲಿ ಪತ್ತೆಯಾಯಿತು. ಸಮಾಧಿ (gravestone) ಎದುರು ಫೋಟೋ, ಮಡಿಕೆ, ಕುಡಿಕೆ, ತಲೆಗೂದಲು ಸಹ ಪತ್ತೆಯಾಗಿವೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ (Holenaraseepur taluk in Hassan) ದೊಡ್ಡ ಬ್ಯಾಗತವಳ್ಳಿಯಲ್ಲಿ ಘಟನೆ ನಡೆದಿದೆ. ಊರಿನ ಗೌಡೇಗೌಡ ಎಂಬುವವರ ಕುಟುಂಬ ಸದಸ್ಯರ ಫೊಟೋಗಳನ್ನು ಇಟ್ಟು ಮೂಢನಂಬಿಕೆ ಮಾಟ ಮಂತ್ರ ಮಾಡಲಾಗಿದೆ (Cemetery Superstitions).
ಕಳೆದ ಅರೇಳು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಜಾಗದಲ್ಲಿ ಈ ಮಾಟಮಂತ್ರ ನಡೆದಿರುವುದು ಆತಂಕಕಾರಿಯಾಗಿದೆ. ಆ ವ್ಯಕ್ತಿಯ ಸಮಾಧಿಯನ್ನು ಅಗೆದು ಮಣ್ಣಿನೊಳಗೆ ಹೂತಿಟ್ಟು, ಮಾಟಗಾರರು ಮಾಟ ಮಂತ್ರ ಮಾಡಿಸಿದ್ದಾರೆ. ದೃಶ್ಯಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ