ಇಂದು ಪುನೀತ್ ರಾಜ್ಕುಮಾರ್ 11ನೇ ದಿನದ ಕಾರ್ಯ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಕಂಠೀರವದಲ್ಲಿ ಪೂಜೆಗೆ ಅವಕಾಶ ನೀಡಲಾಗುತ್ತದೆ. ಸದ್ಯ ಮನೆಯಲ್ಲಿ ಹೂ ಅಲಂಕಾರ, ರಸ್ತೆ ಪೂರ್ತಿ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ.
ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 11ನೇ ದಿನ. ಈ ಹಿನ್ನೆಲೆ ಇಂದು (ನ.8) 11ನೇ ದಿನದ ಕಾರ್ಯ ನಡೆಯುತ್ತಿದೆ. ಪುನೀತ್ ಕುಟುಂಬಸ್ಥರು ಮನೆಯಲ್ಲಿ ಶಾಸ್ತ್ರೋತ್ಸವಾಗಿ ಕಾರ್ಯ ವಿಧಿ ವಿಧಾನ ಮಾಡಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಕಂಠೀರವದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಸದ್ಯ ಮನೆಯಲ್ಲಿ ಹೂ ಅಲಂಕಾರ, ರಸ್ತೆ ಪೂರ್ತಿ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.
Published on: Nov 08, 2021 09:06 AM