Karnataka Budget 2023: ಸರ್ಕಾರದ ಕೊನೆಯ ಬಜೆಟ್ ಮಂಡಿಸಲು ವಿಧಾನ ಸೌಧಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ ಗ್ರ್ಯಾಂಡ್ ಆಗಿತ್ತು!
ಬಜೆಟ್ ಪುಸ್ತಕದೊಂದಿಗೆ ಬೊಮ್ಮಾಯಿ ವಿಧಾನ ಸೌಧಕ್ಕೆ ಆಗಮಿಸುವ ಮೊದಲು ಕರ್ನಾಟಕ ಜನತೆಯ ಪರವಾಗಿ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ್ದಾರೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಸರ್ಕಾರದ ಕೊನೆಯ ಬಜೆಟ್ (Budget) ಮಂಡಿಸಲಾರಂಭಿಸಿದ್ದಾರೆ. ಇದು ಅವರ ಪೊಲಿಟಿಕಲ್ ಕರೀಯರ್ ನ ಮಹತ್ವದ ದಿನಗಳಲ್ಲಿ ಒಂದು. ಬಜೆಟ್ ಪುಸ್ತಕದೊಂದಿಗೆ ಬೊಮ್ಮಾಯಿ ವಿಧಾನ ಸೌಧಕ್ಕೆ (Vidhana Soudha) ಆಗಮಿಸುವ ಮೊದಲು ಕರ್ನಾಟಕ ಜನತೆಯ ಪರವಾಗಿ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ್ದಾರೆ. ವಿಧಾನ ಸೌಧಕ್ಕೆ ಮುಖ್ಯಮಂತ್ರಿಗಳ ಆಗಮನವೂ ಗ್ರ್ಯಾಂಡ್ ಅಗಿತ್ತು. ಅವರೊಂದಿಗೆ ಅವರ ಸಂಪುಟದಲ್ಲಿ ಸಚಿವರಾಗಿರುವ ಭೈರತಿ ಬಸವರಾಜ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ವಿ ಸೋಮಣ್ಣ, ಕೆಸಿ ನಾರಾಯಣಗೌಡ ಮೊದಲಾದವರನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 17, 2023 11:06 AM