Karnataka Budget 2023: ತಮ್ಮನ್ನು ಕಿಚಾಯಿಸಿದ ಸಿದ್ದರಾಮಯ್ಯಗೆ ಕಿವಿ ಮೇಲೆ ಹೂ ಇಟ್ಟುಕೊಳ್ಳದಿರುವಂತೆ ಸಲಹೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ

Updated on: Feb 17, 2023 | 11:37 AM

ಮುಂದುವರಿದು ಮಾತಾಡಿದ ಸಿಎಮ್, ಇದುವರೆಗೆ ವಿರೋಧ ಪಕ್ಷದ ನಾಯಕ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು, ಈಗ ಜನ ಅವರ ಕಿವಿ ಮೇಲೆ ಹೂ ಇಡಲಾರಂಭಿಸಿದ್ದಾರೆ, ಮುಂದೆಯೂ ಅವರು ಹೂ ಇಟ್ಟುಕೊಳ್ಳುವ ಸಮಯವೇ ಬರಲಿದೆ ಎಂದು ಕಿಚಾಯಿಸಿದರು.

ಬೆಂಗಳೂರು: ಈ ಸಾಲಿನ ವಿಧಾನಸಭೆಯಲ್ಲಿ ಕೊನೆಯ ಬಾರಿಗೆ ರಾಜ್ಯ ಬಜೆಟ್ (State Budget) ಮಂಡನೆ ಆರಂಭಕ್ಕೆ ಮುನ್ನ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ (Basavaraj Bommai) ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಕಾಲೆಳೆದರು. ಸಿದ್ದರಾಮಯ್ಯನವರು ಕುಚೋದ್ಯ ಮಾಡುತ್ತಾ ಆಡಿದ ಮಾತೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯವರಿಗೆ ಕಿವಿಯಲ್ಲಿ ಹೂ ಇಟ್ಟುಕೊಳ್ಳಬೇಡಿ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ಇದುವರೆಗೆ ವಿರೋಧ ಪಕ್ಷದ ನಾಯಕ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು, ಈಗ ಜನ ಅವರ ಕಿವಿ ಮೇಲೆ ಹೂ ಇಡಲಾರಂಭಿಸಿದ್ದಾರೆ, ಮುಂದೆಯೂ ಅವರು ಹೂ ಇಟ್ಟುಕೊಳ್ಳುವ ಸಮಯವೇ ಬರಲಿದೆ ಎಂದು  ಕಿಚಾಯಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 17, 2023 11:37 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.