ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಅಣ್ಣಾವ್ರ ‘ಹುಟ್ಟಿದರೆ ಕನ್ನಡ ನಾಡಲ್ಲಿ..’ ಹಾಡಿಗೆ ಮೈ ಕುಲುಕಿಸಿದರು ಸಿಎಮ್ ಬಸವರಾಜ ಬೊಮ್ಮಾಯಿ!
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಬೆಂಗಳೂರು: ಕನ್ನಡ ನಾಡು, ಕನ್ನಡ ಹಾಡಿನ ಅಸ್ಮಿತೆಯೇ ಹಾಗೆ ಮಾರಾಯ್ರೇ, ಎಲ್ಲರನ್ನೂ ಹುರಿದುಂಬಿಸುತ್ತದೆ, ಭಾವಪರವರನ್ನಾಗಿಸುತ್ತದೆ ಮತ್ತು ಕುಣಿಯುವಂತೆ ಮಾಡುತ್ತದೆ. ಕನ್ನಡ ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಶುಕ್ರವಾರ ಬೆಳಗ್ಗೆ ಅಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಕನ್ನಡಿಗರ ಕಣ್ಮಣಿ, ಗಾನ ಗಂಧರ್ವ ದಿವಂಗತ ಡಾ ರಾಜಕುಮಾರ ಅವರು ಹಾಡಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ ಬಸವರಾಜ ಬೊಮ್ಮಾಯಿ ಭಾವಪರವಶತೆಯಿಂದ ಮೈ ಕುಣಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಗಣ್ಯರ ಜೊತೆ ಕ್ರೀಡಾಂಗಣದಲ್ಲಿದ್ದ ಸಾವಿರಾರ ಜನ ಹಾಡಿಗೆ ಧ್ವನಿಗೂಡಿಸಿದರು.