ಒಂದು ತಿಂಗಳಲ್ಲಿ ಬಿಲ್​ಗಳನ್ನು ಬಿಡುಗಡೆ ಮಾಡಿಸುವ ಭರವಸೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ: ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2023 | 2:29 PM

ಬಿಲ್ ಗಳನ್ನು ಕ್ಲೀಯರ್ ಮಾಡಲು ಲಂಚದ ಬೇಡಿಕೆ ಇಡುವ ಬಿಬಿಎಂಪಿ ಕಮೀಶನರ್ ಮತ್ತು ಚೀಫ್ ಎಂಜಿನೀಯರ್ ಅವರನ್ನು ಕರೆಸಿ ತಾಕೀತು ಮಾಡುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಕೆಂಪಣ್ಣ ತಿಳಿಸಿದರು. ಅಧಿಕಾರಿಗಳು ಎಷ್ಟು ಪರ್ಸೆಂಟ್ ಕಮೀಶನ್ ಗೆ ಬೇಡಿಕೆ ಇಡುತ್ತಾರೆ ಎಂದು ಸುದ್ದಿಗಾರರರು ಕೇಳಿದ್ದಕ್ಕೆ, ಪರ್ಸೆಂಟೇಜ್ ಬಗ್ಗೆ ಅವರು ಮಾತಾಡಿಲ್ಲ ನಾವು ಸಹ ಕೇಳಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅಂಶವನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇವೆ ಎಂದು ಕೆಂಪಣ್ಣ ಹೇಳಿದರು.

ಬೆಂಗಳೂರು: ನಿನ್ನೆ ಸುದ್ದಿಗೋಷ್ಟಿ ನಡೆಸಿ ಗುತ್ತಿಗೆದಾರರ ಬಾಕಿಯಿರುವ ಬಿಲ್ ಗಳನ್ನು ಒಂದು ತಿಂಗಳೊಳಗಾಗಿ ಕ್ಲೀಯರ್ ಮಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಕರೆಸಿ ಮಾತಾಡಿದರು. ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕೆಂಪಣ್ಣ, ಕಳೆದ ಐದೂವರೆ ತಿಂಗಳಿಂದ ಬಾಕಿಯಿರುವ ಗುತ್ತಿಗೆದಾರರ ಬಿಲ್ ಗಳನ್ನು (pending bills) ಒಂದು ತಿಂಗಳೊಳಗೆ ಬಿಡುಗಡೆ ಮಾಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ, ರಾಜ್ಯ ಹಣಕಾಸಿನ ಸ್ಥಿತಿ ಚೆನ್ನಾಗಿರದ ಕಾರಣ ತಡವಾಗುತ್ತಿದೆ ಎಂದು ಅವರು ಹೇಳಿದರು ಅಂತ ಕೆಂಪಣ್ಣ ತಿಳಿಸಿದರು. ಗುತ್ತಿಗೆದಾರರ ಬೇರೆ ಸಮಸ್ಯೆಗಳನ್ನು ಸಹ ಬಗೆಹರಿಸುವುದಾಗಿ ಅವರು ಹೇಳಿದ್ದಾರೆ ಮತ್ತು ಬಿಲ್ ಗಳನ್ನು ಕ್ಲೀಯರ್ ಮಾಡಲು ಲಂಚದ ಬೇಡಿಕೆ ಇಡುವ ಬಿಬಿಎಂಪಿ ಕಮೀಶನರ್ ಮತ್ತು ಚೀಫ್ ಎಂಜಿನೀಯರ್ ಅವರನ್ನು ಕರೆಸಿ ತಾಕೀತು ಮಾಡುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಕೆಂಪಣ್ಣ ತಿಳಿಸಿದರು. ಅಧಿಕಾರಿಗಳು ಎಷ್ಟು ಪರ್ಸೆಂಟ್ ಕಮೀಶನ್ ಗೆ ಬೇಡಿಕೆ ಇಡುತ್ತಾರೆ ಎಂದು ಸುದ್ದಿಗಾರರರು ಕೇಳಿದ್ದಕ್ಕೆ, ಪರ್ಸೆಂಟೇಜ್ ಬಗ್ಗೆ ಅವರು ಮಾತಾಡಿಲ್ಲ ನಾವು ಸಹ ಕೇಳಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅಂಶವನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇವೆ ಎಂದು ಕೆಂಪಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.