Assembly Session: ಸಿದ್ದರಾಮಯ್ಯ ಗಂಭೀರ ಮುಖಭಾವದೊಂದಿಗೆ ವಿಧಾನ ಸಭೆ ಪ್ರವೇಶಿಸಿದರೆ ವಿಜಯೇಂದ್ರ ಮಾಧ್ಯಮದವರಿಗೆ ವಿಶ್ ಮಾಡಿ ಒಳನಡೆದರು

ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2023 | 1:12 PM

ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಮಾಧ್ಯಮದವರ ಕಡೆ ನೋಡಿ ಮುಗಳ್ನಕ್ಕು ಕೈಯೆತ್ತಿ ವಿಶ್ ಮಾಡುತ್ತಾರೆ.

ಬೆಂಗಳೂರು: ನೋಡಿ ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇರೋದೇ ಹೀಗೆ. ಹೌದು ಮಾರಾಯ್ರೇ, ಸಿದ್ದರಾಮಯ್ಯ ಯಾವಾಗಲೂ ಗಂಭೀರ ಮುಖಭಾವದೊಂದಿಗೆ ವಿಧಾನ ಸೌಧಕ್ಕೆ ಆಗಮಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿದ್ದಲೂ ಅವರು ಇದೇ ಮುಖಮುದ್ರೆಯೊಂದಿಗೆ ಅಧಿವೇಶನಗಳಲ್ಲಿ ಭಾಗವಹಿಸಲು ಆಗಮಿಸುತ್ತಿದ್ದರು. ಹೊರಗಡೆ ಕಾಯುವ ಮಾಧ್ಯಮದವರ ಕಡೆ ನೋಡಿ ಮುಗುಳ್ನಗುವುದು ಅಥವಾ ಕೈ ಬೀಸುವುದನ್ನು ವಿರಳ ಸಂದರ್ಭಗಳಲ್ಲಿ ಮಾತ್ರ ಮಾಡುತ್ತಾರೆ. ಅವರ ಸುತ್ತಮುತ್ತ ಬಹಳಷ್ಟು ಜನ ಇರುತ್ತಾರೆ. ಭದ್ರತಾ ಸಿಬ್ಬಂದಿ, ಕಚೇರಿ ಸಿಬ್ಬಂದಿ ಮತ್ತು ಆಪ್ತ ಸಹಾಯಕರ ಜೊತೆ ಸದನ ಪ್ರವೇಶಿಸಲು ಪಾಸ್ ಪಡೆದವರು ಸಹ ನಡೆದು ಬರುತ್ತಾರೆ. ಅವರ ಉದ್ದೇಶ ಮಾಧ್ಯಮಗಳ ಕೆಮೆರಾ ಫ್ರೇಮ್ ಗಳಲ್ಲಿ ಬರಬೇಕು. ಸಿದ್ದರಾಮಯ್ಯ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಪುತ್ರ ಬಿವೈ ವಿಜಯೇಂದ್ರ (BY Vijayendra) ಸಹ ನಡೆದು ಬಂದು ವಿಧಾನ ಸೌಧದೊಳಗೆ ಹೋಗುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಮಾಧ್ಯಮದವರ ಕಡೆ ನೋಡಿ ಮುಗಳ್ನಕ್ಕು ಕೈಯೆತ್ತಿ ವಿಶ್ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.