ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಹೋಗದಿರೋದು ಅವರ ವಿವೇಚನೆ ಮತ್ತು ಸಂಸ್ಕೃತಿಗೆ ಬಿಟ್ಟ ವಿಚಾರ: ಪ್ರತಾಪ್ ಸಿಂಹ

|

Updated on: Aug 26, 2023 | 3:47 PM

ಕಾಂಗ್ರೆಸ್ ನಾಯಕರು ಬಿಜೆಪಿ ಲೀಡರ್ ಗಳ ಬಗ್ಗೆ ಮಾಡಿರುವ ಟ್ವೀಟ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಾಪ್, ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಧಿಕಾರ ನೀಡಿರೋದು ದಕ್ಷವಾಗಿ ಆಡಳಿತ ನಡೆಸಲು; ದಿನಬೆಳಗಾದರೆ, ಮರಗಿಡಗಳ ಮೇಲೆ ಕೂತು ಕಾ ಕಾ ಅತ ಕೂಗಲಲ್ಲ, ಎಂದು ಹೇಳಿದರು.

ಮೈಸೂರು: ಪ್ರಧಾನ ಮಂತ್ರಿಯವರು (Prime Minister) ರಾಜ್ಯವೊಂದಕ್ಕೆ ಆಗಮಿಸಿದಾಗ ಆ ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿರಲಿ, ಅದರ ಮುಖ್ಯಮಂತ್ರಿ, ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವರಿಷ್ಠ ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಬರಮಾಡಿಕೊಳ್ಳುವುದು ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ ರೂಢೀಗತ ಸಂಪ್ರದಾಯ, ವಾಡಿಕೆ ಮತ್ತು ಶಿಷ್ಟಾಚಾರ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಯಾಕೆ ಹೋಗಲಿಲ್ಲ ಅನ್ನೋದು ಗೊತ್ತಾಗುತ್ತಿಲ್ಲ, ಅದೆಲ್ಲ ಅವರವರ ವಿವೇಚನೆ ಮತ್ತು ಸಂಸ್ಕೃತಿಗಳಗೆ ಬಿಟ್ಟ ವಿಚಾರ ಎಂದು ಪ್ರತಾಪ್ ಸಿಂಹ ಹೇಳಿದರು. ಕಾಂಗ್ರೆಸ್ ನಾಯಕರು ಬಿಜೆಪಿ ಲೀಡರ್ ಗಳ ಬಗ್ಗೆ ಮಾಡಿರುವ ಟ್ವೀಟ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಾಪ್, ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಧಿಕಾರ ನೀಡಿರೋದು ದಕ್ಷವಾಗಿ ಆಡಳಿತ ನಡೆಸಲು; ದಿನಬೆಳಗಾದರೆ, ಮರಗಿಡಗಳ ಮೇಲೆ ಕೂತು ಕಾ ಕಾ ಅತ ಕೂಗಲಲ್ಲ, ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ