ಆಪರೇಶನ್ ಹಸ್ತ ನಡೆಸುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿರಿಸಿ ಬರಲಿಚ್ಛಿಸುವವರಿಗೆ ಬೇಡ ಅನಲ್ಲ: ಡಿಕೆ ಶಿವಕುಮಾರ್

ಆಪರೇಶನ್ ಹಸ್ತ ನಡೆಸುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿರಿಸಿ ಬರಲಿಚ್ಛಿಸುವವರಿಗೆ ಬೇಡ ಅನಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 26, 2023 | 5:08 PM

ತಾನು ಉಪ ಮುಖ್ಯಮಂತ್ರಿಯಾಗಿರುವುದರ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷನೂ ಆಗಿರುವವದರಿಂದ ಬಿಜೆಪಿ ನಾಯಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಭೇಟಿಯಾಗುತ್ತಾರೆ ಎಂದು ಹೇಳಿದ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತ ನಡೆಸುವ ಜರೂರತ್ತಿಲ್ಲ ಎಂದರು. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ಪಕ್ಷದ ತತ್ವ ಸಿದ್ಧಾಂತಗಳಲ್ಲಿ ವಿಶ್ವಾಸವಿರಿಸಿ ಬರುವವರಿಗೆ ಬೇಡ ಅನ್ನಲಾಗಲ್ಲ ಎಂದು ಅವರು ಹೇಳಿದರು.

ಚಾಮರಾಜನಗರ: ಡಿಕೆ ಶಿವಕುಮಾರ್ (DK Shivakumar) ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಚಾಪರ್ ಒಂದರಲ್ಲಿ ಆಗಮಿಸಿದರು. ನಗರದ ಅಂಬೇಡ್ಕರ್ ಕ್ರೀಡಾಂಗಣದ (Ambedkar Stadium) ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಶುಕ್ರವಾರ ಬೆಂಗಳೂರಲ್ಲಿ ತಮ್ಮನ್ನು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ (MP Renukacharya) ಭೇಟಿಯಾಗಿದ್ದರ ಹಿಂದೆ ಆಪರೇಷನ್ ಹಸ್ತದ ಉದ್ದೇಶವಿಲ್ಲ ಎಂದು ಹೇಳಿದರು. ತಾನು ಉಪ ಮುಖ್ಯಮಂತ್ರಿಯಾಗಿರುವುದರ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷನೂ ಆಗಿರುವವದರಿಂದ ಬಿಜೆಪಿ ನಾಯಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಭೇಟಿಯಾಗುತ್ತಾರೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತ ನಡೆಸುವ ಜರೂರತ್ತಿಲ್ಲ ಎಂದರು. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ಪಕ್ಷದ ತತ್ವ ಸಿದ್ಧಾಂತಗಳಲ್ಲಿ ವಿಶ್ವಾಸವಿರಿಸಿ ಬರುವವರಿಗೆ ಬೇಡ ಅನ್ನಲಾಗಲ್ಲ, ಅವರನ್ನು ನಿರಾಸೆಗೊಳಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 26, 2023 04:30 PM