ಬೆಂಗಳೂರು ಶಾಸಕರ ಜೊತೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತಾಡದೆ ಹೊರಟುಬಿಟ್ಟರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2023 | 6:43 PM

ಮೊದಲು ಹೊರಬಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತಾಡಲು ಮೈಕ್​ಗಳ ಬಳಿ ಬರುತ್ತಿರುವಾಗಲೇ ಮುಖ್ಯಮಂತ್ರಿ ಸಹ ಹೊರ ಬೀಳುತ್ತಾರೆ. ಆದರೆ ಮಾಧ್ಯಮದವರನ್ನು ಕಂಡ ಕೂಡಲೇ ಬೆನ್ನುಹಾಕಿ ವಾಪಸ್ಸು ಹೋಗುತ್ತಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಧ್ಯಮದವರ ಜೊತೆ ಆಗಾಗ ಕಣ್ಣಾ ಮುಚ್ಚಾಲೆ ಆಟ ಆಡುತ್ತಿರುತ್ತಾರೆ. ಹಾಗಂತ ಅವರಿಗೆ ಮಾಧ್ಯಮದವರು ಅಂದರೆ ಅಲರ್ಜಿ ಅಂತೇನೂ ಇಲ್ಲ. ಆದರೆ ಕೆಲವು ಸಲ ಮಾಧ್ಯಮ ಪ್ರತಿನಿಧಿಗಳು ತಮಗಾಗಿ ಕಾಯುತ್ತಿದ್ದರೂ ಮುಖ ಓರೆ ಮಾಡಿಕೊಂಡು, ಇಲ್ಲವೇ ಬೆನ್ನು ಹಾಕಿ ಹೋಗಿ ಬಿಡುತ್ತಾರೆ. ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ (Krishna) ನಗರದ ಶಾಸಕರ ಜೊತೆ ಸಭೆ ನಡೆಸಿ ಹೊರ ಬಂದ ಸಿಎಂ ನಾವು ವಿವರಿಸಿದ ಹಾಗೆಯೇ ಮಾಡಿದರು. ಮೊದಲು ಹೊರಬಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಸುದ್ದಿಗಾರರೊಂದಿಗೆ ಮಾತಾಡಲು ಮೈಕ್ ಗಳ ಬಳಿ ಬರುತ್ತಿರುವಾಗಲೇ ಮುಖ್ಯಮಂತ್ರಿ ಸಹ ಹೊರ ಬೀಳುತ್ತಾರೆ. ಆದರೆ ಮಾಧ್ಯಮದವರನ್ನು ಕಂಡ ಕೂಡಲೇ ಬೆನ್ನುಹಾಕಿ ವಾಪಸ್ಸು ಹೋಗುತ್ತಾರೆ. ಪತ್ರಕರ್ತರು ಸಾರ್ ಅಂತ ಕೂಗಿದರೂ ಕಾರಲ್ಲಿ ಕುಳಿತು ಹೊರಟೇ ಬಿಡುತ್ತಾರೆ. ಅವರು ಹೀಗೆ ಮಾಡೋದು ಮೊದಲ ಸಲವೇನೂ ಅಲ್ಲದ ಕಾರಣ ಸುದ್ದಿಗಾರರಿಗೆ ನಿರಾಸೆಯಾಗುವುದಿಲ್ಲ. ಮುಂಬರಲಿರುವ ಲೋಕ ಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಅವರು ಬೆಂಗಳೂರು ಶಾಸಕರೊಂದಿಗೆ ಚರ್ಚಿಸಿದರು ಅಂತ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.