ಸಾಮಾನ್ಯವಾಗಿ ಮಾಧ್ಯಮದೊಂದಿಗೆ ಮಾತಾಡಲಿಚ್ಛಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಬೆನ್ನುಹಾಕಿ ಹೋಗಿದ್ದು ಯಾಕೋ?
ಸಭೆ ಮುಗಿದ ಬಳಿಕ ಸಿದ್ದರಾಮಯ್ಯ ವಿಧಾನ ಸಭೆ ಹೊರಬರುವ ಮೊದಲು ಸಚಿವ ಪ್ರಿಯಾಂಕ್ ಖರ್ಗ ಬರುತ್ತಾರೆ. ಕೆಲ ಕ್ಷಣಗಳ ಬಳಿಕ ಕಾಣಿಸಿಕೊಳ್ಳುವ ಮುಖ್ಯಮಂತ್ರಿ, ತಮ್ಮ ಎಡಕ್ಕೆ ತಿರುಗಿ ಮಾಧ್ಯಮದವರು ಕಾಯುತ್ತಿರುವುದನ್ನು ಗಮನಿಸುತ್ತಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನಸೌಧದಲ್ಲಿ ನಡೆಸಿದ ಕ್ಯಾಬಿನೆಟ್ ಮೀಟಿಂಗ್ ಗೆ (cabinet meeting) ಒಂದು ವಿಶಿಷ್ಟ ಮಹತ್ವವಿತ್ತು. ಚುನಾವಣೆಗೆ ಮೊದಲು ಕಾಂಗ್ರೆಸ್ ನಾಯಕರು ನಡೆಸಿದ ಪೇ ಸಿಮ್ ಅಭಿಯಾನ ಈಗ ಸಿದ್ದರಾಮಯ್ಯ ಸರ್ಕಾರಕ್ಕೆ ತಿರುಗುಬಾಣವಾಗಿದೆ. ಸಿದ್ದರಾಮಯ್ಯ ಇವತ್ತಿನ ಸಭೆಯಲ್ಲಿ ಖಂಡಿತ ಅದರ ಬಗ್ಗೆ ಮಾತಾಡಿರುತ್ತಾರೆ. ಹಾಗಾಗೇ, ಸಭೆಯ ಬಳಿಕ ಅವರೊಂದಿಗೆ ಮಾತಾಡಲು ಮಧ್ಯಮ ಪ್ರತಿನಿಧಿಗಳು ಉತ್ಸುಕತೆಯಿಂದ ಕಾಯುತ್ತಿದ್ದರು. ಸಭೆ ಮುಗಿದ ಬಳಿಕ ಸಿದ್ದರಾಮಯ್ಯ ವಿಧಾನ ಸಭೆ ಹೊರಬರುವ ಮೊದಲು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರುತ್ತಾರೆ. ಕೆಲ ಕ್ಷಣಗಳ ಬಳಿಕ ಕಾಣಿಸಿಕೊಳ್ಳುವ ಮುಖ್ಯಮಂತ್ರಿ, ತಮ್ಮ ಎಡಕ್ಕೆ ತಿರುಗಿ ಮಾಧ್ಯಮದವರು ಕಾಯುತ್ತಿರುವುದನ್ನು ಗಮನಿಸುತ್ತಾರೆ. ಕೂಡಲೇ ಮುಖ ತಿರುಗಿಸಿ ತಮ್ಮೊಂದಿಗಿದ್ದ ಜನರೊಂದಿಗೆ ಹೆಜ್ಜೆ ಹಾಕಲಾರಂಭಿಸುತ್ತಾರೆ. ಪ್ರೆಸ್ ನವರು ಸಿಎಂ ಸರ್ ಅಂತ ಕೂಗಿದಾಗ ಎಡಗೈ ಮೇಲೆತ್ತಿ ಏನನ್ನೋ ಹೇಳುತ್ತಾ ವ್ಯಕ್ತಿಯೊಬ್ಬರ ಹೆಗಲ ಮೇಲೆ ಕೈಹಾಕಿ ಅಲ್ಲಿಂದ ನಡೆದುಹೋಗುತ್ತಾರೆ. ಅವರು ಉದ್ದೇಶಪೂರ್ವಕವಾಗಿ ಮಾಧ್ಯಮದವರನ್ನು ಕಡೆಗಣಿಸಿದರೆ? ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳಬಹುದು ಅಂತ ಆತಂಕಗೊಂಡರೇ? ಅವರ ವರ್ತನೆ ನೋಡಿದರೆ ಹಾಗನ್ನಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ