CM was waiting: ಕ್ಯಾಬಿನೆಟ್ ಮೀಟಿಂಗ್ ಗೆ ಧಾವಂತದಲ್ಲಿ ಆಗಮಿಸಿದ ಸಚಿವರಿಗೆ ಮಾಧ್ಯಮದವರೊಂದಿಗೆ ಮಾತಾಡಲು ಪುರುಸೊತ್ತಿರಲಿಲ್ಲ!
ಮುಖ್ಯಮಂತ್ರಿ ಕರೆದ ಸಂಪುಟ ಸಭೆಗೆ ಆಗಮಿಸಿದ ಸಚಿವರಿಗೆ ಮೀಟಿಂಗ್ ಶುರುವಾಯ್ತೇನೋ ಎಂಬ ಆತಂಕ ಕಾಡುತಿತ್ತು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಧಾನ ಸೌಧದಲ್ಲಿ ಕರೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಬೇರೆ ಬೇರೆ ಖಾತೆಗಳ ಸಚಿವರು ಒಳಗೆ ಹೋಗುವಾಗ ತೋರಿದ ಧಾವಂತ ನೋಡುವಂತಿತ್ತು! ಮೊದಲು ಆಗಮಿಸುವ ಸಚಿವ ಈಶ್ವರ್ ಖಂಡ್ರೆ (Eshwar Khandre), ಮಾಧ್ಯಮ ಪ್ರತಿನಿಧಿಗಳಿಗೆ ನಮಸ್ಕರಿಸಿ ಒಳಗೆ ಹೋಗುವಾಗ ಸರ್ ಸರ್ ಅಂತ ಸುದ್ದಿಗಾರರು ಕೂಗಿದಕ್ಕೆ ಅವರೆಡೆ ಬರೋದು ನಿಜವಾದರೂ ಮರುಕ್ಷಣವೇ ಓಡುತ್ತಾ ಮೆಟ್ಟಿಲು ಹತ್ತಿ ಒಳಗಡೆ ಹೋಗುತ್ತಾರೆ. ಆಮೇಲೆ ಬರುವ ಎಂಬಿ ಪಾಟೀಲ್ (MB Patil) ಸಹ ಕ್ಯಾಬಿನೆಟ್ ಮೀಟಿಂಗ್ ಕ್ಯಾಬಿನೆಟ್ ಮೀಟಿಂಗ್ ಅನ್ನುತ್ತಾ ಒಳಗೋಗುತ್ತಾರೆ. ನಂತರ ದಿನೇಶ್ ಗುಂಡೂರಾವ್ (Dinesh Gundu Rao) ರಾಜಗಾಂಭೀರ್ಯದೊಂದಿಗೆ ನಡೆದು ಬರತ್ತಾರಾದರೂ ಮಾಧ್ಯಮದವರನ್ನು ನೋಡಿ ಮುಗುಳ್ನಕ್ಕು ಕೈ ಜೋಡಿಸುತ್ತಾ ಒಳಗೆ ಹೋಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

