Bakrid 2023: ಟೊಮೆಟೊ ಬೆಲೆ ಎಷ್ಟಾದರೇನು ಹಬ್ಬವಂತೂ ಆಚರಿಸಲೇಬೇಕಲ್ಲ ಎಂದರೊಬ್ಬ ಮುಸ್ಲಿಂ ಗೃಹಣಿ!

Bakrid 2023: ಟೊಮೆಟೊ ಬೆಲೆ ಎಷ್ಟಾದರೇನು ಹಬ್ಬವಂತೂ ಆಚರಿಸಲೇಬೇಕಲ್ಲ ಎಂದರೊಬ್ಬ ಮುಸ್ಲಿಂ ಗೃಹಣಿ!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Jun 28, 2023 | 2:10 PM

ಬೆಲೆ ಎಷ್ಟಾದರೇನು ಹಬ್ಬ ಮಾಡದಿರೋಕ್ಕಾಗುತ್ತಾ? ಅಂತ ಗೃಹಿಣಿ ಕೇಳುತ್ತಾರೆ, ಅವರು ಹೇಳೋದು ಅಕ್ಷರಶಃ ಸತ್ಯ,

ಬೆಂಗಳೂರು: ನಾಳೆ ಮುಸಲ್ಮಾನ ಸಮುದಾಯ ಬಕ್ರೀದ್ (Bakrid) ಸಂಭ್ರಮ ಸಡಗರದಿಂದ ಆಚರಿಸಲಿದೆ. ಆದರೆ ಮಾಂಸದಡಿಗೆಗೆ ಬೇಕಾಗುವ ಟೊಮೆಟೊ, ಹಸಿರು ತರಕಾರಿ (tomato and green vegetables) ಮತ್ತು ಇತರ ಅಗತ್ಯ ವಸ್ತುಗಳ (essential commodities) ಬೆಲೆ ಕೈಗೆಟುಕದಷ್ಟು ಮೇಲೆ ಹೋಗಿವೆ. ಹಬ್ಬದೂಟದ ತಯಾರಿಗಾಗಿ ತರಕಾರಿ ಕೊಳ್ಳಲು ಬಂದಿರುವ ಈ ಮಹಿಳೆಯ ಮಾತು ಕೇಳಿಸಿಕೊಳ್ಳಿ. ಟೊಮೆಟೊ ಬೆಲೆ ಕೆಜಿಗೆ ರೂ. 100 ಮತ್ತು ಒಂದು ಕಟ್ಟು ಕೊತ್ತಂಬರಿಗೆ ರೂ. 50 ಆಗಿದೆ ಅಂತ ಬೆಲೆಯೇರಿಕೆಯನ್ನು ದೂಷಿಸುತ್ತಾರೆ. ತರಕಾರಿಗಳು ಇಷ್ಟು ತುಟ್ಟಿಯಾದರರೆ ಹೇಗೆ ಹಬ್ಬ ಮಾಡೋದು ಅಂತ ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿ ಕೇಳಿದಾಗ, ಬೆಲೆ ಎಷ್ಟಾದರೇನು ಹಬ್ಬ ಮಾಡದಿರೋಕ್ಕಾಗುತ್ತಾ? ಅಂತ ವಾಪಸ್ಸು ಪ್ರಶ್ನಿಸುತ್ತಾರೆ. ಅವರು ಹೇಳೋದು ಅಕ್ಷರಶಃ ಸತ್ಯ, ಹಬ್ಬ ಹರಿದಿನ, ಈದ್ ಪದೇಪದೆ ಬರಲ್ಲ, ಆಗಾಗ ಬರುತ್ತವೆ ಮತ್ತು ಅವುಗಳನ್ನು ಆಚರಿಸುವ ಅನಿವಾರ್ಯತೆಯಂತೂ ಇದ್ದೇ ಇರುತ್ತದೆ-ಟೊಮೆಟೊ ಬೆಲೆ ಪ್ರತಿ ಕೆಜಿಗೆ ರೂ. 10 ಇರಲಿ ಅಥವಾ ರೂ. 100!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 28, 2023 12:40 PM