Lokayukta Raid: ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ನೌಕರರ ಮನೆಗಳನ್ನೇ ದಾಳಿಗೆ ಆರಿಸಿಕೊಂಡಿದ್ದು ಯಾಕೋ?

Lokayukta Raid: ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ನೌಕರರ ಮನೆಗಳನ್ನೇ ದಾಳಿಗೆ ಆರಿಸಿಕೊಂಡಿದ್ದು ಯಾಕೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2023 | 11:01 AM

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ದಾಳಿ ನಡೆಸಿ ಆಸ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಗಲಕೋಟೆ: ರಾಜ್ಯದ ವಿವಿಧ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದಿಸಿರುವ ಸರ್ಕಾರೀ ನೌಕರರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮನೆಗಳನ್ನೇ ಯಾಕೆ ಆರಿಸಿಕೊಳ್ಳಲಾಯಿತು ಅನ್ನೋದು ಗೊತ್ತಾಗಿಲ್ಲ. ನಗರದ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್ ನಲ್ಲಿರುವ ಕೃಷಿ ಇಲಾಖೆ (agriculture department) ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ (Chetana Patil) ಅವರ ಮನೆಯ ಮೇಲೆ ದಾಳಿ ನಡೆಸಿ ಆಸ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಏರಿಯಾದಲ್ಲಿರುವ ಕೆ ಆರ್ ಶಿರೂರ್ (KR Shiroor) ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಾಗದ ಪತ್ರಗಳ ತಪಾಸಣೆ ನಡೆಸುತ್ತಿದ್ದಾರೆ. ಇವರ ಮನೆಗಳನ್ನು ಒಮ್ಮೆ ನೋಡಿ ಸ್ವಾಮಿ, ಒಂದೆರಡು ಅಂತಸ್ತಿನ ಮನೆ ಕಟ್ಟಿಸಿಕೊಂಡರೆ ಪ್ರತಿಷ್ಠೆಗೆ ಕುಂದು ಅಂತ 3-4 ಫ್ಲೋರ್ ಗಳ ಭಾರೀ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇಂಥ ಮನೆಗಳ ಮುಂದೆ ಒಂದೆರಡು ಬೈಕ್ ಗಳಿದ್ದರೆ ಸರಿಯೆನಿಸಲಾರದು ತಾನೇ? ಹಾಗಾಗೇ ಒಂದೆರಡು ಐಷಾರಾಮಿ ಕಾರು, 3-4 ಹೈ ಎಂಡ್ ಬೈಕ್ ಗಳು ಅಲ್ಲಿ ಕಾಣಿಸುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ