Priya Sudeep: ಸಿನಿಮಾ ಮಾಡೋ ವಿಚಾರದಲ್ಲಿ ಸುದೀಪ್ಗೆ ಸಲಹೆ ನೀಡಿದ ಪತ್ನಿ ಪ್ರಿಯಾ
ಸುದೀಪ್ ಅವರ ಯಾವ ಸಿನಿಮಾ ಹೆಚ್ಚು ಇಷ್ಟ, ಅವರು ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದನ್ನು ಪ್ರಿಯಾ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ‘ಜಿಮ್ಮಿ’ (Jimmy Movie) ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಈ ಚಿತ್ರಕ್ಕೆ ಹೀರೋ. ಇತ್ತೀಚೆಗೆ ಲಾಂಚ್ ಇವೆಂಟ್ ನಡೆದಿದೆ. ಈ ವೇಳೆ ಟಿವಿ9 ಕನ್ನಡದ ಜೊತೆಗೆ ಪ್ರಿಯಾ ಮಾತನಾಡಿದ್ದಾರೆ. ಸುದೀಪ್ ಅವರ ಯಾವ ಸಿನಿಮಾ ಹೆಚ್ಚು ಇಷ್ಟ, ಅವರು ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದನ್ನು ಪ್ರಿಯಾ ಹೇಳಿದ್ದಾರೆ. ‘ನನಗೆ ಸುದೀಪ್ (Sudeep) ನಟನೆಯ ‘ವಿಷ್ಣುವರ್ಧನ’ ಸಿನಿಮಾ ತುಂಬಾನೇ ಇಷ್ಟ. ಅವರ ಹಾಸ್ಯ ಈ ಚಿತ್ರದಲ್ಲಿ ಇಷ್ಟವಾಗುತ್ತದೆ. ಈ ರೀತಿಯ ಪಾತ್ರಗಳು ಅವರಿಗೆ ಹೆಚ್ಚು ಸಿಕ್ಕಿಲ್ಲ. ಆ ರೀತಿ ಪಾತ್ರವನ್ನು ಅವರು ಹೆಚ್ಚು ಮಾಡಲಿ’ ಎಂದಿದ್ದಾರೆ ಪ್ರಿಯಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

