Lokayukta raid: ತಹಸೀಲ್ದಾರ್ ಅಜಿತ್ ರೈ ಮತ್ತೊಂದು ಮನೆಯಲ್ಲೂ ಅಪಾರ ಪ್ರಮಾಣದ ಚಿನ್ನಾಭರಣ, ಕಂತೆ ಕಂತೆ ಕರೆನ್ಸಿ ನೋಟು ಪತ್ತೆ!
ಅಜಿತ್ ರೈನನ್ನು ಸರ್ಕಾರ ಕೆಲದಿನಗಳ ಮಟ್ಟಿಗೆ ಸಸ್ಪೆಂಡ್ ಮಾಡುತ್ತದೆ ಆಮೇಲೆ ಬಡ್ತಿ ನೀಡಿ ಸೇವೆಗೆ ವಾಪಸ್ಸು ಕರೆಸಿಕೊಳ್ಳುತ್ತದೆ
ಬೆಂಗಳೂರು: ಇದು ಚಿನ್ನಾಭರಣಗಳ ಅಂಗಡಿಯಲ್ಲ ಮಾರಾಯ್ರೇ. ಮೊನ್ನೆವರೆಗೆ ಕೆಆರ್ ಪುರಂ ತಹಸೀಲ್ದಾರ್ ಆಗಿದ್ದ ಅಜಿತ್ ರೈ (Ajit Rai) ಎರಡನೇ ಮನೆ. ಇನ್ನೊಂದು ಮನೆಯಲ್ಲಿ ಕಂತೆ ಕಂತೆ ನೋಟುಗಳು, ಚಿನ್ನ ಮತ್ತು ಬೆಳ್ಳಿ ಆಭರಣ (jewelry) ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿದ್ದನ್ನು ಮತ್ತೊಂದು ವಿಡಿಯೋದಲ್ಲಿ ತೋರಿಸಿದ್ದೇವೆ. ಇದು ಸಹಕಾರ ನಗರದಲ್ಲಿರುವ (Sahakaranagar) ಮನೆ. ಇಲ್ಲೂ ಜನಸಾಮಾನ್ಯನ ಊಹೆಗೆ ನಿಲುಕದಷ್ಟು ಚಿನ್ನದ ಒಡವೆ, ಬೆಳ್ಳಿ ವಸ್ತುಗಳು ಸಿಕ್ಕಿವೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಜೀವನವಿಡೀ ದುಡಿದರೂ ಒಂದೈವತ್ತು ಗ್ರಾಮ್ ಚಿನ್ನ ಮಾಡಿಕೊಳ್ಳಲಾರ. ಆದರೆ, ಒಬ್ಬ ತಹಸೀಲ್ದಾರ್ 10-15 ವರ್ಷಗಳ ಸರ್ವಿಸ್ ನಲ್ಲಿ ತನ್ನ ಮುಂದಿನ ಮೂರು ತಲೆಮಾರುಗಳಿಗಾಗುವಷ್ಟು ಸಂಪಾದನೆ ಮಾಡುತ್ತಾನೆ. ಮತ್ತೊಂದು ಸಂಗತಿಯೇನು ಗೊತ್ತಾ? ಅಜಿತ್ ರೈನನ್ನು ಸರ್ಕಾರ ಕೆಲದಿನಗಳ ಮಟ್ಟಿಗೆ ಸಸ್ಪೆಂಡ್ ಮಾಡುತ್ತದೆ ಆಮೇಲೆ ಬಡ್ತಿ ನೀಡಿ ಸೇವೆಗೆ ವಾಪಸ್ಸು ಕರೆಸಿಕೊಳ್ಳುತ್ತದೆ. ಇದೇ ನಡೆಯುತ್ತಾ ಬಂದಿರೋದು ಮುಂದೆಯೂ ಈ ಪದ್ಧತಿ ಜಾರಿಯಲ್ಲಿರಲಿದೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ