ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಪದ್ಯದ ಸಾಲುಗಳನ್ನು ಹೇಳುತ್ತಾ ದಿ ಸಿದ್ದಲಿಂಗಯ್ಯರನ್ನು ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Updated on: Aug 25, 2023 | 4:27 PM

ಅವರು ಹಾಗೆ ಹೇಳುತ್ತಿದ್ದಾಗ ಸಭಿಕರಲ್ಲಿ ಒಬ್ಬರು ಪದೇಪದೆ ಪ್ರಾಂಮ್ಟ್ ಮಾಡುತ್ತಿದ್ದರು. ಮೊದಲಿಗೆ ಅವರು (ಸಭಿಕ) ಹೇಳಿದ ಪದಗಳನ್ನು ತಮ್ಮ ಭಾಷಣದಲ್ಲಿ ಉಪಯೋಗಿಸಿದ ಮುಖ್ಯಮಂತ್ರಿಗಳಿಗೆ ನಂತರ ಬೇಸರ ತರಿಸತೊಡಗಿತು. ಮತ್ತೊಮ್ಮೆ ಸಭಿಕ ಪ್ರಾಂಮ್ಟ್ ಮಾಡಲು ಮುಂದಾದಾಗ ಅವರು, ಹೇ ಸಾಕು ಸುಮ್ಮಿರಯ್ಯ ಅಂತ ಸುಮ್ಮನಾಗಿಸಿದರು!

ಬೆಂಗಳೂರು: ನಗರದ ಗಾಂಧಿಭವನದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ (Dalit poet Siddalingaiah) ಅವರ ಸ್ಮರಣೆ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮಾಜಿ ಸಚಿವ ಹೆಚ್ ಆಂಜನೇಯ (H Anjaneya) ಮತ್ತು ಹಲವಾರು ಸಾಹಿತಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು. ಸಿದ್ದಲಿಂಗಯ್ಯನವರು ಬರೆದ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ಯಾತಂತ್ರ್ಯ ಪದ್ಯದ ಮೊದಲ ಸಾಲುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ ಅದನ್ನು ಪ್ರಸ್ತುತ ವಿದ್ಯಮಾನಗಳೊಂದಿಗೆ ಥಳಕು ಹಾಕಿದರು. ಕೇವಲ ಜೇಬು ತುಂಬಿಸುವ ಅಂಬಾನಿ ಮತ್ತು ಅದಾನಿ ಅವರಿಗೆ ಬಂತು 47ರ ಸ್ವಾತಂತ್ರ್ಯ ಎಂದು ಅವರು ಹೇಳಿದರು. ಅವರು ಹಾಗೆ ಹೇಳುತ್ತಿದ್ದಾಗ ಸಭಿಕರಲ್ಲಿ ಒಬ್ಬರು ಪದೇಪದೆ ಪ್ರಾಂಮ್ಟ್ ಮಾಡುತ್ತಿದ್ದರು. ಮೊದಲಿಗೆ ಅವರು (ಸಭಿಕ) ಹೇಳಿದ ಪದಗಳನ್ನು ತಮ್ಮ ಭಾಷಣದಲ್ಲಿ ಉಪಯೋಗಿಸಿದ ಮುಖ್ಯಮಂತ್ರಿಗಳಿಗೆ ನಂತರ ಬೇಸರ ತರಿಸತೊಡಗಿತು. ಮತ್ತೊಮ್ಮೆ ಸಭಿಕ ಪ್ರಾಂಮ್ಟ್ ಮಾಡಲು ಮುಂದಾದಾಗ ಅವರು, ಹೇ ಸಾಕು ಸುಮ್ಮಿರಯ್ಯ ಅಂತ ಸುಮ್ಮನಾಗಿಸಿದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More