ತನಗೆ ಹಾಕಿದ ಹಾರವನ್ನೇ ಸಹೋದರ ಚೆನ್ನರಾಜ್ ಗೆ ಹಾಕಲು ಲಕ್ಷ್ಮಿ ಹೆಬ್ಬಾಳ್ಕರ್ ಮುಂದಾದಾಗ ಸಿಎಂ ಸಿದ್ದರಾಮಯ್ಯ ತಡೆಯುತ್ತಾರೆ!

|

Updated on: Aug 29, 2023 | 1:26 PM

ಕಾರ್ಯಕ್ರಮ ಸುರಳೀತವಾಗಿ ನಡೆಯಲಿ, ಯೋಜನೆಯ ಲಾಭ ಹೆಚ್ಚೆಚ್ಚು ಜನ ಪಡೆದುಕೊಳ್ಳಲಿ ಮೊದಲಾದ ಹರಕೆಗಳನ್ನು ಹೊತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಹೆಚ್ ಸಿ ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಮೈಸೂರು: ರಾಜಧಾನಿ ಬೆಂಗಳೂರಿನ ರಾಜಕೀಯ ಚಟುವಟಿಕೆಗಳೆಲ್ಲ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಶಿಫ್ಟ್ ಆಗಿವೆ. ನಾಳೆ ನಗರದಲ್ಲಿ ಸಿದ್ದರಾಮಯ್ಯ ಸರ್ಕಾರದ (Siddaramaiah government) ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಲಾಂಚ್ ಕಾರ್ಯಕ್ರಮ (Gruha Lakshmi Scheme Launch Programme) ನಡೆಯಲಿದೆ. ಕಾರ್ಯಕ್ರಮ ಸುರಳೀತವಾಗಿ ನಡೆಯಲಿ, ಯೋಜನೆಯ ಲಾಭ ಹೆಚ್ಚೆಚ್ಚು ಜನ ಪಡೆದುಕೊಳ್ಳಲಿ ಮೊದಲಾದ ಹರಕೆಗಳನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಮತ್ತು ಇನ್ನೂ ಹಲವಾರು ಗಣ್ಯರು ನಂದಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಪೂಜೆ ನೆರವೇರಿಸಿದ ಪ್ರಧಾನ ಅರ್ಚಕ ಡಾ ಶಶಿಶೇಖರ್ ದೀಕ್ಷಿತ್ (Dr Shashi Shekar Dixit) ಅವರು ಗಣ್ಯರಿಗೆ ಹಾರ ಹಾಕಿ ಶಾಲು ಹೊದಿಸಿದರು. ಈ ಸಂದರ್ಭದಲ್ಲಿ ತನ್ನ ಸಹೋದರನಿಗೆ ಹಾರ ಹಾಕಲಾರರು ಎಂದು ಭಾವಿಸುವ ಲಕ್ಷ್ಮಿ, ತಮಗೆ ಹಾಕಿದ್ದ ಹಾರವನ್ನು ಹಾಕಲು ಮುಂದಾಗುತ್ತಾರೆ. ಆದರೆ ಮುಖ್ಯಮಂತ್ರಿ ಅವರನ್ನು ತಡೆದು ಅರ್ಚಕರಿಂದ ಹಾರ ಹಾಕಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ