ಕುಮಾರಸ್ವಾಮಿ ಏನನ್ನೋ ಹೇಳಿದಾಕ್ಷಣ ಬಂದು ಕೇಳ್ತೀರಲ್ಲ ಅಂತ ಮಾಧ್ಯಮದವರ ಮೇಲೆ ರೇಗಿದ ಸಿದ್ದರಾಮಯ್ಯ

|

Updated on: Nov 18, 2023 | 2:12 PM

ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿವೇಕಾನಂದ ಯಾರು ಅಂತ ಗೊತ್ತಿಲ್ಲದೆ ಏನೆಲ್ಲ ಮಾತಾಡಬೇಡಿ, ವಿವೇಕಾನಂದ ಅನ್ನೋರು ಮೈಸೂರಿನ ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಈಗ ಪ್ರಶ್ನೆಯಲ್ಲಿರುವ ವಿವೇಕಾನಂದನಿಗೆ ವರ್ಗಾ ಆಗಿರೋದು ವಿವಿ ಪುರಂಗೆ, ಮತ್ತು ಅದಿರೋದು ಚಾಮರಾಜ ಕ್ಷೇತ್ರದಲ್ಲಿ, ಆ ಕ್ಷೇತ್ರದ ಶಾಸಕ ಹರೀಶ್ ಗೌಡ ಆಗಿರೋದ್ರಿಂದ ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದು ಹೇಳುತ್ತಾರೆ.

ಮೈಸೂರು: ತನ್ನ ಮತ್ತು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನಡುವೆ ನಡೆದ ಸಂಭಾಷಣೆ ವರ್ಗಾವಣೆಗಳಿಗೆ ಸಂಬಂಧಿಸಿದ್ದು, ಸಂಭಾಷಣೆಯಲ್ಲಿ ಯತೀಂದ್ರ ಉಲ್ಲೇಖಿಸಿದ ವಿವೇಕಾನಂದ (Vivekananda) ಎಂಬ ವ್ಯಕ್ತಿಯ ಟ್ರಾನ್ ಫರ್ ಆಗಿದೆ, ವರ್ಗಾವಣೆ ಧಂದೆ ನಡೆಯುತ್ತಿದೆ ಅನ್ನೋದಿಕ್ಕೆ ಬೇರೆ ಸಾಕ್ಷಿ ಬೇಕಾ ಅಂತ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ ಮೂಲಕ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಇಂದು ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿವೇಕಾನಂದ ಯಾರು ಅಂತ ಗೊತ್ತಿಲ್ಲದೆ ಏನೆಲ್ಲ ಮಾತಾಡಬೇಡಿ, ವಿವೇಕಾನಂದ ಅನ್ನೋರು ಮೈಸೂರಿನ ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಈಗ ಪ್ರಶ್ನೆಯಲ್ಲಿರುವ ವಿವೇಕಾನಂದನಿಗೆ ವರ್ಗಾ ಆಗಿರೋದು ವಿವಿ ಪುರಂಗೆ, ಮತ್ತು ಅದಿರೋದು ಚಾಮರಾಜ ಕ್ಷೇತ್ರದಲ್ಲಿ, ಆ ಕ್ಷೇತ್ರದ ಶಾಸಕ ಹರೀಶ್ ಗೌಡ ಆಗಿರೋದ್ರಿಂದ ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದು ಹೇಳುತ್ತಾರೆ. ಕುಮಾರಸ್ವಾಮಿ ಏನೋ ಹೇಳಿದಾಕ್ಷಣ ಅಥವಾ ಟ್ವೀಟ್ ಮಾಡಿದಾಕ್ಷಣ ಯಾವುದೇ ಯೋಚನೆ ಮಾಡದೆ ಬಂದು ಪ್ರಶ್ನೆ ಕೇಳ್ತೀರಲ್ಲ ಅಂತ ಮಾಧ್ಯಮದವರ ಮೇಲೆ ಅವರು ರೇಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ