ತಂದೆಯ ಕುಡಿತ ನೋಡಿ ನಟನೆ ಕಲಿತ ಯುವಕ; ಅಚ್ಚರಿ ಹೊರಹಾಕಿದ ಜಗ್ಗೇಶ್
ನಟನೆಯನ್ನು ಯಾರು ಹೇಗೆ ಬೇಕಿದ್ದರೂ ಕಲಿಯಬಹುದು. ಇದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ‘ಕಾಮಿಡಿ ಕಿಲಾಡಿಗಳು’ ಐದನೇ ಸೀಸನ್ ಬರುತ್ತಿದೆ. ಇದರಲ್ಲಿ ಸ್ಪರ್ಧಿಯಾಗಿ ಒಬ್ಬರು ಬಂದಿದ್ದಾರೆ. ಅವರ ನಟನೆ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಅವರು ಮಾಡಿದ್ದು ಕುಡುಕನ ಪಾತ್ರ. ಆ ಬಗ್ಗೆ ಇಲ್ಲಿದೆ ವಿವರ.
‘ಕಾಮಿಡಿ ಕಿಲಾಡಿಗಳು ಸೀಸನ್ 5’ ಗೆ ಆಡಿಷನ್ ನಡೆದಿದೆ. ಈಗ ಸ್ಪರ್ಧಿಗಳನ್ನು ವೇದಿಕೆ ಮೇಲೆ ಆಯ್ಕೆ ಮಾಡುವ ಸಮಯ. ನಟನೆಯನ್ನು ಹೇಗೆ ಬೇಕಿದ್ದರೂ ಕಲಿಯಬಹುದು ಎಂಬುದಕ್ಕೆ ಇಲ್ಲಿಗೆ ಬಂದ ಸ್ಪರ್ಧಿಯೇ ಉದಾಹರಣೆ. ಉಡುಪಿಯ ಸಂದೀಪ್ ಅವರು, ತಂದೆಯಿಂದ ಕುಡಿದಂತೆ ನಟಿಸೋದು ಹೇಗೆ ಎಂದು ಕಲಿತಿದ್ದಾರೆ. ಹಾಗಂತ ಅವರ ತಂದೆ ಆ್ಯಕ್ಟರ್ ಅಲ್ಲ. ಬದಲಿಗೆ ಕುಡುಕ. ಈ ವಿಚಾರ ಕೇಳಿ ಜಗ್ಗೇಶ್ ಶಾಕ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.