ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಸ್ಪರ್ಧೆ ಇರೋದು, ಬಿಜೆಪಿ ಲೆಕ್ಕಕ್ಕಿಲ್ಲ: ರಾಮಲಿಂಗಾ ರೆಡ್ಡಿ

|

Updated on: Mar 10, 2023 | 6:26 PM

ಕಳೆದ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಒಂದು ಸೀಟ್ ಕೂಡ ಸಿಕ್ಕಿರಲಿಲ್ಲ. ಆದರೆ ಬಾರಿ ಜೆಡಿಎಸ್ ನಷ್ಟೇ ಸೀಟುಗಳು ಬರಬಹುದು ಇಲ್ಲವೇ ಒಂದು ಸ್ಥಾನ ಹೆಚ್ಚು ಸಿಗಬಹುದು ಎಂದು ಅವರು ಹೇಳಿದರು.

ಬೆಂಗಳೂರು: ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ ಬೆಂಬಲ ಘೋಷಿಸಿರುವುದು ಅವರಿಗಷ್ಟೇ ನಷ್ಟ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು. ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲ್ಲಿ ಕೇವಲ ಜೆಡಿಎಸ್ (JDS) ಮತ್ತು ಕಾಂಗ್ರೆಸ್ ನಡುವೆ ಹೋರಾಟವಿದೆ, ಬಿಜೆಪಿ ಲೆಕ್ಕಕ್ಕಿಲ್ಲ, ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಿದ್ದರೆ ಉಪಯೋಗವಾಗುತಿತ್ತು ಎಂದು ರೆಡ್ಡಿ ಹೇಳಿದರು. ಕಳೆದ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಒಂದು ಸೀಟ್ ಕೂಡ ಸಿಕ್ಕಿರಲಿಲ್ಲ. ಆದರೆ ಬಾರಿ ಜೆಡಿಎಸ್ ನಷ್ಟೇ ಸೀಟುಗಳು ಬರಬಹುದು ಇಲ್ಲವೇ ಒಂದು ಸ್ಥಾನ ಹೆಚ್ಚು ಸಿಗಬಹುದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 10, 2023 06:26 PM