ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ಬೆಳಕಿಗೆ ಬಾರದಿರಲು ಕಾಂಗ್ರೆಸ್ ನನ್ನ ತಮ್ಮನನ್ನು ಬಲಿಪಶು ಮಾಡಿದೆ: ಪ್ರತಾಪ್ ಸಿಂಹ, ಸಂಸದ

ಅರುಣ್​ ಕುಮಾರ್​ ಬೆಳ್ಳಿ

Updated on: Jan 01, 2024 | 7:02 PM

ಜಾಮೀನು ಸಿಕ್ಕ ನಂತರ ತನ್ನ ತಮ್ಮ ಬೆಂಗಳೂರಿಗೆ ಹೋಗಿದ್ದಾನೆಯೇ ಹೊರತು ಕಾಂಗ್ರೆಸ್ ನಾಯಕರು ಹೇಳುತ್ತಿರುವ ಹಾಗೆ ತಲೆಮರೆಸಿಕೊಂಡಿಲ್ಲ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರೂ. 6.5 ಕೋಟಿಯ ಚೆಕ್ ಬೌನ್ಸ್ ಪ್ರಕರಣ ಬೆಳಕಿಗೆ ಬರೋದನ್ನು ತಡೆಯಲು ಕಾಂಗ್ರೆಸ್ ವಿಕ್ರಮ ಸಿಂಹ ವಿರುದ್ಧ ಆರೋಪಗಳನ್ನು ಹೊರೆಸಿ ವಿಷಯಾಂತರ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.

ಮಡಿಕೇರಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha ) ತನ್ನ ತಮ್ಮನನ್ನು ಸುಖಾಸುಮ್ಮನೆ ಅಪರಾಧಿಯಂತೆ (criminal) ತೋರಿಸುವ ಪ್ರಯತ್ನವನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳ (social media) ಮೂಲಕ ಮಾಡುತ್ತಿದೆ ಎಂದು ಹೇಳಿದರು. ಮಾತಿನಾರಂಭದಲ್ಲಿ ಅವರು ಗೃಹ ಸಚಿವ ಜಿ ಪರಮೇಶ್ವರ್ (J Parameshwara) ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ, ಯಾಕೆ ಅಂತ ಕನ್ನಡಿಗರಿಗೆ ಅರ್ಥವಾಗಲ್ಲ. ಎಫ್ ಐಅರ್ ನಲ್ಲಿ ರಾಕೇಶ್ ಶೆಟ್ಟಿ ಅರೋಪಿ ನಂಬರ್ 1 ಮತ್ತು ಜಯಮ್ಮ ಆರೋಪಿ ನಂಬರ್ 2 ಅಂತ ದಾಖಲಾಗಿದೆ ಅಂತ ಹೇಳಿದ ಅವರು ಪ್ರಕರಣ ಡಿಸೆಂಬರ್ 16ರಂದು ದಾಖಲಾಗಿದ್ದರೂ ತಾವು 24 ಡಿಸೆಂಬರ್ ರಂದು ಹೇಳಿಕೆ ನೀಡುವವರೆಗೆ ಕಾಂಗ್ರೆಸ್ ಸುಮ್ಮನಿರುತ್ತದೆ ಮತ್ತು ತಮ್ಮ ಹೇಳಿಕೆಯ ನಂತರವೇ ತನ್ನ ತಮ್ಮ ಮರಗಳ್ಳ ಮತ್ತು ತಾನು ನಾಡುಗಳ್ಳ ಅಂತ ಅದರ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಗಳಲ್ಲಿ ಪೋಸ್ಟ್ ಗಳನ್ನು ಮಾಡುತ್ತಾರೆ ಎಂದರು. ಹಾಗಾಗಿ, ಪ್ರಕರಣದಲ್ಲಿ ರಾಜಕೀಯ ಎಳೆತಂದಿದ್ದು ಕಾಂಗ್ರೆಸ್ ಪಕ್ಷವೇ ಹೊರತು ತಾನಲ್ಲ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.