ಹೆಚ್ ಡಿ ಕೋಟೆ ಕಾಂಗ್ರೆಸ್ ಶಾಸಕ ಅನಿಲ ಚಿಕ್ಕಮಾದು ಸಹೋದರಿ ರಂಜಿತಾ ಚಿಕ್ಕಮಾದು ನಾಳೆ ಜೆಡಿ(ಎಸ್) ಸೇರ್ಪಡೆ
ಅನಿಲ ಚಿಕ್ಕಮಾದು ಸಹೋದರಿ ರಂಜಿತಾ ಚಿಕ್ಕಮಾದು ಅವರು ಪಕ್ಷ ತೊರೆದು ಜೆಡಿ(ಎಸ್) ಸೇರುವ ನಿರ್ಧಾರ ಮಾಡಿದ್ದಾರೆ.
ಮೈಸೂರು: ಹೆಚ್ ಡಿ ಕೋಟೆಯ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು (Anil Chikkamadu) ಅವರಿಗೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಆಘಾತವೊಂದು ಎದುರಾಗಿದೆ. ಅವರ ಸಹೋದರಿ ರಂಜಿತಾ ಚಿಕ್ಕಮಾದು (Ranjita Chikkamadu) ಅವರು ಪಕ್ಷ ತೊರೆದು ಜೆಡಿ(ಎಸ್) ಸೇರುವ ನಿರ್ಧಾರ ಮಾಡಿದ್ದಾರೆ. ಇತ್ತೀಚಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡ ಅವರ ಪುತ್ರ ಮತ್ತು ಹಣಸೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಹರೀಶ್ ಗೌಡ ಜೊತೆ ಕಾಣಿಸಿಕೊಳ್ಳುತ್ತಿರುವ ರಂಜಿತಾ, ಗುರುವಾರ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಜೆಡಿ(ಎಸ್) ಪಕ್ಷ ಸೇರುವ ನಿರೀಕ್ಷೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ