ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಸರ್ಕಾರ ನಿಸ್ಸಂದೇಹವಾಗಿ ಅದನ್ನು ಮಟ್ಟ ಹಾಕಲಿದೆ ಎಂದರು ಸಚಿವ ಸುನಿಲ್ ಕುಮಾರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2022 | 9:26 PM

ಹಿಜಾಬ್ ಶಿಕ್ಷಣದ ಪ್ರಗತಿಗೆ ಮಾರಕವಾಗಬಾರದು, ಹಿಜಾಬ್ ಕ್ಯಾಂಪಸ್​ಗಳ ವಾತಾವರಣವನ್ನು ಹಾಳುಮಾಡಬಾರದು ಮತ್ತು ಶಿಕ್ಷಣ ಇಲಾಖೆಯಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ ಸುನಿಲ್ ಕುಮಾರ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನ ಇದನ್ನೆಲ್ಲ ಸಹಿಸಲಾರರು ಎಂದರು.

ಉಡುಪಿ ಮತ್ತು ಕುಂದಾಪುರನಲ್ಲಿ ತಲೆದೋರಿದ ಹಿಜಾಬ್ ಪ್ರಕರಣದ (Hijab issue) ಬಗ್ಗೆ ದೂರದ ಕಾಶ್ಮೀರನಲ್ಲಿ (Kashmir) ಚರ್ಚೆಯಾಗುತ್ತಿದೆ ಎಂದರೆ ಇದರ ಜಾಲ ಎಷ್ಟು ವಿಸ್ತೃತವಾಗಿದೆ ಮತ್ತು ಇದರ ಹಿಂದೆ ದೊಡ್ಡ ಷಡ್ಯಂತ್ರ (conspiracy) ಮತ್ತು ಕಾಂಗ್ರೆಸ್ (Congress) ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ ಸುನಿಲ್ ಕುಮಾರ್ (V Sunil Kumar) ಶುಕ್ರವಾರ ಬೆಂಗಳೂರಲ್ಲಿ ಹೇಳಿದರು. ಈ ವಿವಾದ ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಹರಡಲು ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಮತ್ತು ಇದಕ್ಕೆಲ್ಲ ಕಾಂಗ್ರೆಸ್ ಪರೋಕ್ಷವಾಗಿ ಕಾರಣವಾಗಿದೆ ಎಂದು ಸಚಿವರು ಹೇಳಿದರು. ಈ ಪ್ರಕರಣ ವಿವಾದದ ರೂಪ ತಳೆಯಲು ತಮ್ಮ ಸರ್ಕಾರ ಕಾರಣವಲ್ಲ, ಆದರೆ ಸರ್ಕಾರ ಅದನ್ನು ಮಟ್ಟ ಹಾಕುವುದು ಮಾತ್ರ ಅನುಮಾನಾತೀತ ಎಂದು ಅವರು ಹೇಳಿದರು. ಒಂದೆರಡು ದಿನಗಳಲ್ಲಿ ಸುತ್ತೋಲೆಗಳನ್ನು ಜಾರಿ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸುವುದು ಸಾಧ್ಯವಿಲ್ಲ. ವಿಷಯವನ್ನು ಒಂದು ಕಾನೂನಿನ ಚೌಕಟ್ಟಿನೊಳಗೆ ತರಲು, ಕಾನೂನು ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ ಸುನಿಲ್ ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಹೇಳಲಾಗಿದೆ, ವರದಿ ಸಲ್ಲಿಕೆಯಾಗುವರೆಗೆ ತಾಳ್ಮೆ ಇಲ್ಲವೆಂದರೆ ಹೇಗೆ ಎಂದರು.

ಕೊರೋನಾದಿಂದ ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಈಗಷ್ಟೇ ಕ್ರಮೇಣವಾಗಿ ತೆರೆದುಕೊಳ್ಳುತ್ತಿವೆ, ಅಗಲೇ ಈ ಬಗೆಯ ಗೊಂದಲಗಳನ್ನು ಸೃಷ್ಟಿಸಿದರೆ ಹೇಗೆ ಎಂದು ಸಚಿವರು ಪ್ರಶ್ನಿಸಿದರು.

ಹಿಜಾಬ್ ಶಿಕ್ಷಣದ ಪ್ರಗತಿಗೆ ಮಾರಕವಾಗಬಾರದು, ಹಿಜಾಬ್ ಕ್ಯಾಂಪಸ್​ಗಳ ವಾತಾವರಣವನ್ನು ಹಾಳುಮಾಡಬಾರದು ಮತ್ತು ಶಿಕ್ಷಣ ಇಲಾಖೆಯಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ ಸಚಿವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನ ಇದನ್ನೆಲ್ಲ ಸಹಿಸಲಾರರು ಎಂದರು.

ಸಚಿವರು ಮಾತಾಡಿದ್ದನ್ನು ಗಮನಿಸಿದರೆ, ಸರ್ಕಾರ ರಚಿಸಿರುವ ಸಮಿತಿ ಎಂಥ ವರದಿ ನೀಡಲಿದೆ ಅನ್ನೋದು ಸ್ಪಷ್ಟವಾಗುತ್ತದೆ. ಅವರ ಕೊನೆಯ ವಾಕ್ಯವಂತೂ ಹೇಳಿಕೆ ಕಮ್ಮಿ ಥ್ರೆಟ್ ಜಾಸ್ತಿ ಅನಿಸುತ್ತಿದೆ. ರಾಜ್ಯ ಉಚ್ಛ ನ್ಯಾಯಾಲಯ ಸರ್ಕಾರದ ಹೇಳಿಕೆಗಳನ್ನು ಗಮನಿಸುತ್ತಿದೆ ಅಂತ ಸಚಿವರ ಗಮನಕ್ಕೆ ಬಾರದೆ ಹೋಗಿದ್ದು ದುರಂತ ಮಾರಾಯ್ರೇ.

ಇದನ್ನೂ ಓದಿ:   ಹಿಜಾಬ್ ತೆಗೆದು ಕ್ಲಾಸಿಗೆ ಬರುವುದಾದರೆ ಬನ್ನಿ; ಹಿಜಾಬ್ ಧರಿಸಿ ಪಾಠ ಕೇಳುವ ಅವಕಾಶ ಇಲ್ಲ: ಸಭೆಯಲ್ಲಿ ತೀರ್ಮಾನ

Follow us on