ಲೋಕ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಸಿಗಲಾರವು ಅಂತ ಭಯಪಟ್ಟೇ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ಶುರುಮಾಡಿದ್ದಾರೆ: ಬಸವರಾಜ ಬೊಮ್ಮಾಯಿ

|

Updated on: Aug 25, 2023 | 12:09 PM

ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಸಿಗಲಾರವು ಅನ್ನೋದು ಖಚಿತವಾಗಿದೆ ಎಂದು ಹೇಳಿದರು. ಹಾಗೇನಾದರೂ ಆದರೆ ರಾಜ್ಯ ಸರ್ಕಾರದ ಭವಿಷ್ಯ ಡೋಲಾಯಮನವಾಗಲಿದೆ, ಹಾಗಾಗೇ, ಬೇರೆ ಪಕ್ಷಗಳ ನಾಯಕರನ್ನು ಸೆಳೆದು ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುವ ಹುನ್ನಾರ ಸರ್ಕಾರದ್ದು, ಆದರೆ ಅದು ತನ್ನ ಪ್ರಯತ್ನದಲ್ಲಿ ಯಶ ಕಾಣದು ಎಂದು ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ: ಸರಕಾರದ ಭ್ರಷ್ಟಾಚಾರ ಮತ್ತು ಇತರ ಅವ್ಯವಹಾರಗಳನ್ನು ವರದಿ ಮಾಡುವ ಪತ್ರಕರ್ತರಿಗೆ ನೋಟೀಸ್ ನೀಡಿ ಪತ್ರಿಕಾ ಸ್ವಾತಂತ್ರ್ಯ (Freedom of Press) ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (Freedom of Speech) ಮೊಟಕುಗೊಳಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರ ಧೋರಣೆಯನ್ನು (dictatorial) ಪ್ರದರ್ಶಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬೊಮ್ಮಾಯಿ ಅವರಿಗೆ; ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಆಪರೇಷನ್ ಹಸ್ತದ ಬಗ್ಗೆ ಕೇಳಿದಾಗ, ಮುಂಬರುವ ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಭಯ ಹುಟ್ಟಿಕೊಂಡಿದೆ. ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಸಿಗಲಾರವು ಅನ್ನೋದು ಖಚಿತವಾಗಿದೆ ಎಂದು ಹೇಳಿದರು. ಹಾಗೇನಾದರೂ ಆದರೆ ರಾಜ್ಯ ಸರ್ಕಾರದ ಭವಿಷ್ಯ ಡೋಲಾಯಮನವಾಗಲಿದೆ, ಹಾಗಾಗೇ, ಬೇರೆ ಪಕ್ಷಗಳ ನಾಯಕರನ್ನು ಸೆಳೆದು ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುವ ಹುನ್ನಾರ ಸರ್ಕಾರದ್ದು, ಆದರೆ ಅದು ತನ್ನ ಪ್ರಯತ್ನದಲ್ಲಿ ಯಶ ಕಾಣದು ಎಂದು ಬೊಮ್ಮಾಯಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ