Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪಣ್ಣ ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಬಿಡುಗಡೆಯಾಗುತ್ತಾ? ಎಟಿಎಂ ಸರ್ಕಾರ ಎಂಬುದು ಮತ್ತೆ ನಿಜವಾಗುತ್ತಿದೆ; ಬೊಮ್ಮಾಯಿ ಆಕ್ರೋಶ

Contractors versus DK Shivakumar; ಬಿಜೆಪಿ ಸಮಯದಲ್ಲಿ ಹಣ ಬಿಡುಗಡೆ ಆಗಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಅವರು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಏನೇನು ಮಾಡಿದೆ ಎನ್ನುವುದು ಕಾಂಟ್ರ್ಯಾಕ್ಟರ್​​ಗಳಿಗೇ ಗೊತ್ತಿದೆ. ಹಣವನ್ನು ಹಿಡಿದುಕೊಂಡಿರುವುದರಿಂದ ಅನುಮಾನಗಳು ಹೆಚ್ಚುತ್ತಿವೆ. ಹಣ ಬಿಡುಗಡೆ ಮಾಡಿ ಬಿಟ್ಟಿದ್ದರೆ ಅನುಮಾನವೇ ಇರುತ್ತಿರಲಿಲ್ಲ ಎಂದು ಹೇಳಿದರು.

ಕೆಂಪಣ್ಣ ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಬಿಡುಗಡೆಯಾಗುತ್ತಾ? ಎಟಿಎಂ ಸರ್ಕಾರ ಎಂಬುದು ಮತ್ತೆ ನಿಜವಾಗುತ್ತಿದೆ; ಬೊಮ್ಮಾಯಿ ಆಕ್ರೋಶ
ಬಸವರಾಜ ಬೊಮ್ಮಾಯಿ
Follow us
Anil Kalkere
| Updated By: Ganapathi Sharma

Updated on:Aug 11, 2023 | 2:49 PM

ಬೆಂಗಳೂರು, ಆಗಸ್ಟ್ 11: ಕರ್ನಾಟಕ ಸರ್ಕಾರದ ಸಚಿವರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ (D Kempanna) ಕ್ಲೀನ್​ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai), ಅವರು ಕ್ಲೀನ್​ಚಿಟ್ ನೀಡಿದ ಕೂಡಲೇ ಬಿಲ್ ಬಿಡುಗಡೆಯಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ‌ ಹಿಂದೆ ಇದೇ ಕೆಂಪಣ್ಣ ಆರೋಪ ಮಾಡಿದ್ದರು. ಈಗ ಕಾಂಟ್ರ್ಯಾಕ್ಟರ್‌ಗಳೇ ಆರೋಪ ಮಾಡುತ್ತಿದ್ದಾರೆ. ನೀವು (ಕೆಂಪಣ್ಣ) ಯುಟರ್ನ್ ಮಾಡಿದರೆ, ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಸಿಗುತ್ತದಾ? ಸರಿಯಾಗಿ ಕೆಲಸ ಮಾಡಿದ ಕಾಂಟ್ರ್ಯಾಕ್ಟರ್‌ಗಳಿಗೆ ಹಣ ಸಿಗದ ಕಾರಣಕ್ಕೆ ರಾಜ್ಯಪಾಲರ ಬಳಿ ಹೋಗಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಸಂಗ್ರಹ ಮಾಡಿದ ಹಣವನ್ನೂ ಬಿಬಿಎಂಪಿ ಕೊಡುತ್ತಿಲ್ಲ. ಸರ್ಕಾರದ ಹಣವನ್ನೂ ಕೊಡುತ್ತಿಲ್ಲ. ಕಾಂಟ್ರ್ಯಾಕ್ಟರ್‌ಗಳು ದಯಾಮರಣ ಕೋರುವ ಸಂದರ್ಭ ಇಲ್ಲಿವರೆಗೆ ಬಂದಿರಲಿಲ್ಲ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಇದು ಎಟಿಎಂ ಸರ್ಕಾರ ಎನ್ನುವುದು ನಿಜವಾಗುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಸಮಯದಲ್ಲಿ ಹಣ ಬಿಡುಗಡೆ ಆಗಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಕ್ಕೆ ಬೊಮ್ಮಾಯಿ ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಏನೇನು ಮಾಡಿದೆ ಎನ್ನುವುದು ಕಾಂಟ್ರ್ಯಾಕ್ಟರ್​​ಗಳಿಗೇ ಗೊತ್ತಿದೆ. ಹಣವನ್ನು ಹಿಡಿದುಕೊಂಡಿರುವುದರಿಂದ ಅನುಮಾನಗಳು ಹೆಚ್ಚುತ್ತಿವೆ. ಹಣ ಬಿಡುಗಡೆ ಮಾಡಿ ಬಿಟ್ಟಿದ್ದರೆ ಅನುಮಾನವೇ ಇರುತ್ತಿರಲಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Kempanna Press Meet: ಯಾವ ಸಚಿವರು ಕಮಿಷನ್ ಕೇಳಿಲ್ಲ, ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಅಂದು ವಿಧಾನಸೌಧದಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಿರಿ. ಈಗ ಜನರ ಕಿವಿ ಮೇಕೆ ಹೂ ಇಡುತ್ತಿದ್ದೀರಿ. ಬಿಬಿಎಂಪಿ ಬಿಲ್ ಬಾಕಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾವು ಆನ್‌ಲೈನ್ ಮಾಡಿದ್ದರಿಂದ ವ್ಯವಸ್ಥೆ ದಾರಿಗೆ ಬರುತ್ತಿತ್ತು. ಹಣ‌ ಬಿಡುಗಡೆ ಕೂಡಲೇ ಮಾಡಬೇಕು, ಇದಕ್ಕೆ ಗಡುವು ನೀಡುವ ಅಗತ್ಯವಿಲ್ಲ. ಈಗಾಗಲೇ ಮೂರು ತಿಂಗಳು ತಡವಾಗಿದೆ. ಇದರ ಬಗ್ಗೆ ಅನೇಕ ಕಾನೂನು ತೊಡಕುಗಳೂ ಇವೆ. ಕಾನೂನು ಹೋರಾಟ ಸಹ ಮಾಡುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸರ್ಕಾರದ ಕುತ್ತಿಗೆಗೆ ಗುತ್ತಿಗೆ ಕುಣಿಕೆ! ಬೊಮ್ಮಾಯಿ, ಅಶೋಕ್ ಜತೆ ಗುತ್ತಿಗೆದಾರರ ಸಮಾಲೋಚನೆ, ಪಟ್ಟು ಬಿಡದ ಡಿಕೆ ಶಿವಕುಮಾರ್

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಯಾವೊಬ್ಬ ಸಚಿವರು ತಮ್ಮ ಬಿಲ್ ಬಿಡುಗಡೆಗೆ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಗುಂಪಿಗೆ ಸಂಬಂಧವಿಲ್ಲ ಎಂದು ಹೇಳಿದ್ದರು.

ನಮ್ಮ ಬಾಕಿ ಇರುವ ಬಿಲ್‌ಗಳನ್ನು ಬಿಡುಗಡೆ ಮಾಡುವಂತೆ ನಾವು ಸರ್ಕಾರವನ್ನು ಕೋರುತ್ತೇವೆ. ಇದುವರೆಗೆ ಯಾವುದೇ ಗುತ್ತಿಗೆದಾರರು ಭ್ರಷ್ಟಾಚಾರದ ದೂರು ನೀಡಿ ನನ್ನನ್ನು ಸಂಪರ್ಕಿಸಿಲ್ಲ. ಯಾವ ಸಚಿವರೂ ಆಯೋಗದ ಬಳಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಆರೋಪ ಮಾಡುತ್ತಿರುವ ಗುಂಪಿನ ಜತೆ ನಮಗೆ ಸಂಬಂಧವಿಲ್ಲ. ಇದು 5-6 ವರ್ಷಗಳ ಹಿಂದೆ ರೂಪುಗೊಂಡಿರುವ ಸಂಘ ಎಂದು ಕೆಂಪಣ್ಣ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Fri, 11 August 23