AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kempanna Press Meet: ಯಾವ ಸಚಿವರು ಕಮಿಷನ್ ಕೇಳಿಲ್ಲ, ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

40% ಕಮಿಷನ್ ಮುಂದಿಟ್ಟುಕೊಂಡೆ ಆಡಳಿತಕ್ಕೆ ಬಂದ ಕಾಂಗ್ರೆಸ್, ಇದೀಗ ಅದೇ ಆರೋಪವನ್ನ ಎದುರಿಸುತ್ತಿದೆ. ಬಿಬಿಎಂಪಿ ಗುತ್ತಿಗೆದಾರರು ತಮ್ಮ ಬಿಲ್ ಪಾವತಿ ಮಾಡುವಂತೆ ರಾಜ್ಯಪಾಲರಿಂದ ಹಿಡಿದು ಶಾಸಕರ ಮನೆ ಬಾಗಿಲಿನ ಕದ ತಟ್ಟಿದ್ದಾರೆ. ಇನ್ನು ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್​ ಸಹ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘ ಹಾಗೂ ಸರ್ಕಾರದ ನಡುವಿನ ಜಟಾಪಟಿ ಮಧ್ಯೆ ಕರ್ನಾಟಕ ಗುತ್ತಿಗೆದಾರೆ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರವೇಶ ಮಾಡಿದ್ದು, ಸರ್ಕಾರದ ವಿರುದ್ಧ ಕಮಿಷನ್​ ಆರೋಪಗಳಿಗೆ ತೆರೆ ಎಳೆದಿದ್ದಾರೆ.

Kempanna Press Meet: ಯಾವ ಸಚಿವರು ಕಮಿಷನ್ ಕೇಳಿಲ್ಲ, ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಕೆಂಪಣ್ಣ
Shivaraj
| Updated By: ರಮೇಶ್ ಬಿ. ಜವಳಗೇರಾ|

Updated on:Aug 11, 2023 | 12:10 PM

Share

ಬೆಂಗಳೂರು, (ಆಗಸ್ಟ್ 11): ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ (commission) ಆರೋಪ ಮಾಡಿಲ್ಲ. . ಯಾರೋ ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು. ಕೆಲವೊಂದಿಷ್ಟು ಹಣ ಬಿಡುಗಡೆ ಕೂಡ ಆಗಿದೆ.  ಏಳು ತಿಂಗಳ ಕಾಮಗಾರಿಯ ಬಾಕಿ ಹಣ ಬರಬೇಕು. ಬಾಕಿ ಬಿಲ್​​ ಪಾವತಿಗೆ ಈಗಾಗಲೇ ಸಿಎಂ ಬಳಿ ನಾವು ಮನವಿ ಮಾಡಿದ್ದೇವೆ. ನಮಗೆ ಯಾವ ಸಚಿವರು ಕಮಿಷನ್ ಕೇಳಿಲ್ಲ. ಕಮಿಷನ್​ ಕೇಳಿದ್ದಾರೆ ಎಂದು ಗುತ್ತಿಗೆದಾರರು ನನ್ನ ಬಳಿ ಹೇಳಿಲ್ಲ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ (Karnataka contractor association) ಅಧ್ಯಕ್ಷ ಕೆಂಪಣ್ಣ(Kempanna) ಸ್ಪಷ್ಟಪಡಿಸಿದರು. ಈ ಮೂಲಕ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪಿಸುತ್ತಿರುವ ಕಮಿಷನ್ ಆರೋಪಕ್ಕೆ ಕೆಂಪಣ್ಣ ಅವರು ಕ್ಲೀನ್ ಚೀಟ್ ನೀಡಿದರು.

ಇದನ್ನೂ ಓದಿ: Karnataka Breaking Kannada News Live: ಯಾವ ಸಚಿವರು ಕಮಿಷನ್ ಕೇಳಿಲ್ಲ, ಕಂಟ್ರಾಕ್ಟರ್​​ಗಳಿಗೂ ಭಾಗ್ಯ ಕೊಡಿ ಸ್ವಾಮಿ; ಕೆಂಪಣ್ಣ

ಬೆಂಗಳೂರಿನಲ್ಲಿ ಇಂದು (ಆಗಸ್ಟ್ 11) ಸುದ್ದಿಗರರೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಈಗಾಗಲೇ ಏಳು ತಿಂಗಳಿಂದ ಬಾಕಿ ಬರಬೇಕು. ಈಗಾಗಲೇ ಕೆಲವಷ್ಟು ಹಣ ಬಿಡುಗಡೆ ಆಗಿದೆ. ನೂರು ಕೋಟಿ ರೂ. ಸಾಲಲ್ಲ. ಸಿಎಂ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ಅವರು ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದ್ರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ. ಯಾವ ಸಚಿವರು ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ‌. ಯಾರೋ ಮೂರನೇ ವ್ಯಕ್ತಿ ಹೇಳುತ್ತಿರುವುದು ಸಂಬಂಧವಿಲ್ಲ ಎಂದು ಹೇಳಿದರು.

ನಾವು ಮೊದಲು ಆರಂಭ ಮಾಡಿದಾಗ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿ ಗೆ ಪತ್ರ ಕೊಟ್ಟೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಹೀಗೆ ಹಲವರಿಗೆ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಕರೆದಿದ್ದಕ್ಕೆ ಹೋಗಿದ್ದೆ. ಈಗ ವಿಪಕ್ಷ ನಾಯಕ ಕರೆದ್ರೆ ಹೋಗಲ್ಲ ಎನ್ನುವುದಕ್ಕೆ ಆಗಲ್ಲ. ಬಿಜೆಪಿ ವಿಪಕ್ಷ ನಾಯಕ ಕರೆಯಲಿ ಹೋಗುತ್ತೇನೆ. ನಾವು ಕಂಟ್ರಾಕ್ಟರ್ಸ್, ನಾನು ಕಂಟ್ರಾಕ್ಟರ್ಸ್ ಪರವಾಗಿ ಮಾತ್ರ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿಗೆ ಎಷ್ಟು ಬಾರಿ ಭೇಟಿಯಾಗಿ ಮಾತನಾಡಿದ್ದೆವು. ಆದ್ರೆ ಅವರು ನಮಗೆ ಭೇಟಿಗೆ ಅವಕಾಶವೇ ಕೊಡಲಿಲ್ಲ. ಅವರಿಗೆ ಚೀಟಿ ಕೊಟ್ಟೆವು, ಜೇಬಲ್ಲಿ ಇಟ್ಟುಕೊಂಡ್ರು. ಆದರೆ ಕರೆದು ಮಾತಾಡೋ ಕೆಲಸ ಮಾಡಲಿಲ್ಲ. ಬದಲಿಗೆ ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದರು. ಆದ್ರೂ, ನಮಗೆ ಈಗಲೂ ಅವರ ಮೇಲೆ ಗೌರವ ಇದೆ ಎಂದರು.

ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ. 25 ಸಾವಿರ ಕೋಟಿ ರೂ. ಬಾಕಿ ಇದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಕೆಲಸ ಮಾಡಿರುವುದಕ್ಕೆ ನಮಗೂ ಭಾಗ್ಯ ಕೊಡಿ, ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ನಾವು ಡೆಡ್ ಲೈನ್ ಕೊಡುತ್ತುಲ್ಲ. ನಮಗೆ ಈಗಲೇ ಹಣ ಬಿಡುಗಡೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Published On - 12:08 pm, Fri, 11 August 23

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!