ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು

ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂಡಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ.

ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು
ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ!
Follow us
| Updated By: ಸಾಧು ಶ್ರೀನಾಥ್​

Updated on:Aug 11, 2023 | 12:03 PM

ಯಲಹಂಕ -ಬೆಂಗಳೂರು, ಆಗಸ್ಟ್ 11: ಒಂದೇ ಸೈಟಿನ ಹಕ್ಕುಪತ್ರವನ್ನು ಇಬ್ಬರಿಗೆ ಎರೆಡೆರಡು ಬಾರಿ ವಿತರಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಲ‌ ಸೋಲ‌ ಮಾಡಿ ಕಟ್ಟಿದ್ದ ಮನೆ ಹಾಗೂ ಸೈಟ್ (Site) ಈಗ ಕಂಡವರ ಪಾಲಾಗುತ್ತಿದೆ. ಇದು ನೈಜ ಮಾಲೀಕರ ಪಡಿಪಾಟಲು. ದಶಕದಿಂದ ವಾಸಿಸುತ್ತಿರುವ ನಿವಾಸಿಗಳ ಮನೆ ಹಾಗೂ ಸೈಟ್ ಬೇರೆಯವರಿಗೆ ಮಂಜೂರು ಮಾಡಲಾಗಿದೆ. ಒಮ್ಮೆ ಹಕ್ಕುಪತ್ರ ‌ನೀಡಿ ಮಂಜೂರು ಮಾಡಿದ್ದರು. ಇದೀಗ ಮತ್ತೊಬ್ಬರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಯಲಹಂಕ ತಾಲೂಕಿನ (Yelahanka) ಮೇಡಿ ಅಗ್ರಹಾರ ಗ್ರಾಮದ ಸರ್ಕಾರಿ ಸೈಟ್ಗಳು ಗೋಲ್ ಮಾಲ್ (Illegal Site) ಆರೋಪ ಇದಾಗಿದೆ. ಹಣಕ್ಕಾಗಿ (Money) ಅಧಿಕಾರಿಗಳೇ (Tahsildar) ಬೇರೆಯವರಿಗೆ ಹಕ್ಕುಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂದಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ. ಹೀಗಾಗಿ ಕಟ್ಟಿರುವ ಮನೆ ಹಾಗೂ ಸೈಟ್ ‌ನಮ್ಮದು ಅಂತ ಹಕ್ಕುಪತ್ರ ಪಡೆದವರಿಂದ ಗಲಾಟೆ ಶುರುವಾಗಿದೆ.

5 ರಿಂದ 10 ಲಕ್ಷ ರೂ ಹಣ ಪಡೆದು ಅಕ್ರಮವಾಗಿ ಹಕ್ಕುಪತ್ರ ಕೊಟ್ಟಿದ್ದಾರೆ ಅಂತ ನಿವಾಸಿಗಳು ಆರೋಪಿಸುತ್ತಿದ್ದಾರೆ. ಹಕ್ಕಪತ್ರಗಳನ್ನ ಕೈಯಲ್ಲಿ ಹಿಡಿದುಕೊಂಡು ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಷ್ಟಪಟ್ಟು 2006 ರಲ್ಲಿ 12 ಸಾವಿರ ಹಣ ಕಟ್ಟಿ, ಹಕ್ಕುಪತ್ರ ಪಡೆದಿದ್ದೇವೆ. ಆದ್ರೆ ಇದೀಗ ಬೇರೆಯವರಿಗೆ ತಹಶಿಲ್ದಾರ್ ಮತ್ತೊಂದು ಹಕ್ಕುಪತ್ರ ‌ನೀಡಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

Also Read: ಕೆಂಪು ಸುಂದರಿ ಟೊಮ್ಯಾಟೋ ಬೆಲೆ ಕಳೆದುಕೊಳ್ಳುತ್ತಿದೆ! ಕಾರಣವೇನು ಗೊತ್ತಾ?

ಅನ್ಯಾಯಕ್ಕೊಳಗಾದ ಸ್ಥಳೀಯ ನಿವಾಸಿಗಳಿಗೆ ಇದರಿಂದ ನ್ಯಾಯ ಕೊಡಿಸುವಂತೆ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ. ನ್ಯಾಯ ಕೊಡಿಸದಿದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾ‌‌ಮದ ನಿವಾಸಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:02 pm, Fri, 11 August 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ