ಸ್ಪಂದನರ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದ ವಿಜಯರಾಘವೇಂದ್ರ ಮತ್ತು ಬಿಕೆ ಶಿವರಾಂ ಕುಟುಂಬ
ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ವಿಜಯರಾಘವೇಂದ್ರ ಸೋಮವಾರ ಬೆಳಗಿನ ಜಾವ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನ ಹೊಟೆಲೊಂದರಲ್ಲಿ ಕಡಿಮೆ ರಕ್ತದೊತ್ತಡದಿಂದ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದರು.
ಬೆಂಗಳೂರು: ಅಲ್ಪಾಯುಷಿಯಾಗಿ ಜೀವಿಸಿ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಮರಣವನ್ನನ್ನಪ್ಪಿದ ಸ್ಪಂದನ ವಿಜಯರಾಘವೇಂದ್ರರ (Spandana Vijay Raghavendra) ಹಾಲು ತುಪ್ಪ ಶಾಸ್ತ್ರವನ್ನು ಕುಟುಂಬಸ್ಥರು ಇಂದು ನೇರವೇರಿಸಿದರು. ಮೊದಲಿಗೆ ವಿಜಯರಾಘವೇಂದ್ರ (Vijay Raghavendra) ಮತ್ತು ಅವರ ಮಗ ಶೌರ್ಯ (Shourya) ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಬಿಕೆ ಶಿವರಾಂ, ರಕ್ಷಿತ್ ಮತ್ತು ಕುಟುಂಬದ ಸದಸ್ಯರು ಒಬ್ಬರ ನಂತರ ಮತ್ತೊಬ್ಬರಂತೆ ಶಾಸ್ತ್ರ ಪೂರೈಸಿದರು. ಸ್ಪಂದನ ಮಾವ ಅಂದರೆ ವಿಜಯ ರಾಘವೇಂದ್ರ ಮತ್ತು ಶ್ರೀ ಮುರಳಿ ತಂದೆ ಎಸ್ ಎ ಚಿನ್ನೇಗೌಡ ಅವರು ಶೌರ್ಯನ ಬಲಭಾಗದಲ್ಲಿದ್ದರೆ ಮುರಳಿ ಎಡಕ್ಕಿದ್ದರು. ಬೇರೆಯವರೆಲ್ಲ ಶಾಸ್ತ್ರ ನಡೆಸುವಾಗ ವಿಜಯರಾಘವೇಂದ್ರ ಹಿಂದೆ ಸರಿದು ನಿರ್ಭಾವುಕರಾಗಿ ನಿಲ್ಲುತ್ತಾರೆ. ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ವಿಜಯರಾಘವೇಂದ್ರ ಸೋಮವಾರ ಬೆಳಗಿನ ಜಾವ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನ ಹೊಟೆಲೊಂದರಲ್ಲಿ ಕಡಿಮೆ ರಕ್ತದೊತ್ತಡದಿಂದ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ