ಪತ್ನಿ ವಿದ್ಯಾ ಹಾಗೂ ಮಕ್ಕಳೊಂದಿಗೆ ಅತ್ಯಂತ ಭಾವುಕನಾಗಿ ಸ್ಪಂದನರ ಹಾಲು-ತುಪ್ಪ ಶಾಸ್ತ್ರ ನೆರವೇರಿಸಿದ ಶ್ರೀಮುರಳಿ

ಪತ್ನಿ ವಿದ್ಯಾ ಹಾಗೂ ಮಕ್ಕಳೊಂದಿಗೆ ಅತ್ಯಂತ ಭಾವುಕನಾಗಿ ಸ್ಪಂದನರ ಹಾಲು-ತುಪ್ಪ ಶಾಸ್ತ್ರ ನೆರವೇರಿಸಿದ ಶ್ರೀಮುರಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2023 | 1:21 PM

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅನ್ನುತ್ತಾರೆ, ಅದರೆ ಅಣ್ಣತಮ್ಮಂದಿರು ಬೆಳೀತಾ  ಬೆಳೀತಾ ದಾಯಾದಿ ಅನ್ನೋ ಗಾದೆ ವಿಜಯ ರಾಘವೇಂದ್ರ ಮತ್ತು  ಶ್ರೀಮುರಳಿ ಅವರ ವಿಷಯದಲ್ಲಿ ಸುಳ್ಳಾಗುತ್ತದೆ. ಚಿನ್ನೇಗೌಡರ ಮಕ್ಕಳ ನಡುವೆ ಅಗಾಧವಾದ ಪ್ರೀತಿ ಮತ್ತು ಅನ್ಯೋನ್ಯತೆ ಇದೆ. 

ಬೆಂಗಳೂರು: ಎಸ್ ಎ ಚಿನ್ನೇಗೌಡರ ಕುಟುಂಬ ಒಂದು ಕ್ಲೋಸ್ ನಿಟ್ ಫ್ಯಾಮಿಲಿಯಂತಿದೆ (Close-knit family) ಅಂತ ನಾವು ಯಾವಾಗಲೂ ಹೇಳುತ್ತಿರುತ್ತೇವೆ. ಒಡಹುಟ್ಟಿದರು ಬೆಳೀತಾ ಬೆಳೀತಾ ದಾಯಾದಿಗಳು ಅನ್ನುತ್ತಾರೆ, ಅದರೆ ವಿಜಯರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ (Sri Murali) ವಿಷಯಕ್ಕೆ ಬಂದರೆ ಗಾದೆ ಸುಳ್ಳಾಗುತ್ತದೆ. ಅವರಿಬ್ಬರ ನಡುವೆ ಅಗಾಧವಾದ ಭ್ರಾತೃಪ್ರೇಮ, ಅನ್ಯೋನ್ಯತೆ ಮತ್ತು ಅಂಡರ್ ಸ್ಟ್ಯಾಂಡಿಂಗ್ ಇದೆ. ತನ್ನತ್ತಿಗೆ ಸ್ಪಂದನ ಅಕಾಲಿಕ ಮರಣಕ್ಕೆ ತುತ್ತಾದಾಗ ಮುರಳಿ ದುಃಖದಿಂದ ಪರಿತಪಿಸಿದನ್ನು ಕನ್ನಡಿಗರೆಲ್ಲ ನೋಡಿದ್ದಾರೆ. ಇವತ್ತು ನಗರದ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನರ ಹಾಲು ತುಪ್ಪ ಶಾಸ್ತ್ರ ನೆರವೇರಿಸುವ ಸಮಯದಲ್ಲೂ ಅಷ್ಟೇ, ಮುರಳಿ ಭಾವುಕರಾಗಿದ್ದರು ಮತ್ತು ಬಹಳ ಕಷ್ಟಪಟ್ಟು ಕಣ್ಣೀರು ತಡೆಯುತ್ತಿದ್ದರು. ಅವರು ತಮ್ಮ ಮಗಳೊಂದಿಗೆ ಮತ್ತು ಅವರ ಪತ್ನಿ ವಿದ್ಯಾ ಮಗನೊಂದಿಗೆ ಶಾಸ್ತ್ರ ಪೂರೈಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ