AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕಾಕ್​​ನಲ್ಲಿ ನಿಜಕ್ಕೂ ಆಗಿದ್ದೇನು? ಮಾಹಿತಿ ನೀಡಿದ ನಟ ಶ್ರೀಮುರಳಿ

ಸ್ಪಂದನಾ ಸಾಯುವ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿದ್ದರು? ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆಲ್ಲ ಶ್ರೀಮುರಳಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬ್ಯಾಂಕಾಕ್​​ನಲ್ಲಿ ನಿಜಕ್ಕೂ ಆಗಿದ್ದೇನು? ಮಾಹಿತಿ ನೀಡಿದ ನಟ ಶ್ರೀಮುರಳಿ
ಸ್ಪಂದನಾ-ವಿಜಯ್-ಶ್ರೀಮುರಳಿ
ರಾಜೇಶ್ ದುಗ್ಗುಮನೆ
|

Updated on: Aug 07, 2023 | 12:21 PM

Share

ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕುಟುಂಬದವರ ಜೊತೆ ಸ್ಪಂದನಾ ಬ್ಯಾಂಕಾಕ್​ಗೆ ಪ್ರವಾಸ ತೆರಳಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಪತ್ನಿಯನ್ನು ಕಳೆದುಕೊಂಡ ವಿಜಯ್ ರಾಘವೇಂದ್ರ ಅವರು ಅತೀವ ದುಃಖದಲ್ಲಿದ್ದಾರೆ. ಅವರು ಕೂಡ ಸದ್ಯ ಬ್ಯಾಂಕಾಕ್​​ನಲ್ಲೇ ಇದ್ದಾರೆ. ಸ್ಪಂದನಾ ಅವರ ಮೃತದೇಹ ಮಂಗಳವಾರ (ಆಗಸ್ಟ್ 7) ಭಾರತಕ್ಕೆ ಕರೆತರಲಾಗುತ್ತದೆ. ನಿಜಕ್ಕೂ ಅಲ್ಲಿ ಏನಾಯಿತು ಎನ್ನುವ ಕುರಿತು ವಿಜಯ್ ಸಹೋದರ ಶ್ರೀಮುರಳಿ (Srimurali) ಅವರು ಮಾಹಿತಿ ನೀಡಿದ್ದಾರೆ.

ಸ್ಪಂದನಾ ಸಾಯುವ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿದ್ದರು? ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆಲ್ಲ ಶ್ರೀಮುರಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕಾಕ್​​ಗೆ ಸ್ಪಂದನಾ ತೆರಳಿದ್ದು ಏಕೆ? ಅಲ್ಲಿ ಏನಾಯಿತು ಎಂಬ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಧಿ ತುಂಬಾ ಕ್ರೂರ; ವಿವಾಹ ವಾರ್ಷಿಕೋತ್ಸವದ ಖುಷಿಯ ಹೊಸ್ತಿಲಲ್ಲಿದ್ದ ಸ್ಪಂದನಾ-ವಿಜಯ್ ರಾಘವೇಂದ್ರ

‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದರು. ಅತ್ತಿಗೆ ಕುಟುಂಬಸ್ಥರ ಜತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಇದ್ದ ಕಾರಣ ವಿಜಯ್ ಇಲ್ಲಿಯೇ ಇದ್ದರು. ಅವರು ಕೂಡ ಈ ಟ್ರಿಪ್​ಗೆ ಜಾಯಿನ್ ಆಗುವವರಿದ್ದರು. ನಿನ್ನೆ (ಆಗಸ್ಟ್ 6) ರಾತ್ರಿ ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ. ಲೋ ಬಿಪಿ ಇಂದ ಹೀಗೆ ಆಯಿತು ಎಂದು ತಿಳಿದು ಬಂದಿದೆ. ಮತ್ತಷ್ಟು ಮಾಹಿತಿಯನ್ನು ನಾಳೆ ನೀಡುತ್ತೇವೆ’ ಎಂದು ಮುರಳಿ ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್-ಸ್ಪಂದನಾ ಪ್ರೇಮಕ್ಕೆ ಮುನ್ನಡಿ ಹಾಡಿತ್ತು ಮಲ್ಲೇಶ್ವರದ ಕಾಫಿ ಡೇ

ವಿಜಯ್ ಹಾಗೂ ಸ್ಪಂದನಾ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್​. ಸ್ಪಂದನಾ ಅವರು ಮೊದಲ ನೋಟದಲ್ಲೇ ವಿಜಯ್​​ಗೆ ಇಷ್ಟವಾದರು. ಬಳಿಕ ಮನೆಯವರೆಲ್ಲ ಮಾತುಕತೆ ನಡೆಸಿ ಮದುವೆ ನಿಶ್ಚಯಿಸಿದರು. ಆಗಸ್ಟ್ 26ರಂದು ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ