ವಿಜಯ್-ಸ್ಪಂದನಾ ಪ್ರೇಮಕ್ಕೆ ಮುನ್ನಡಿ ಹಾಡಿತ್ತು ಮಲ್ಲೇಶ್ವರದ ಕಾಫಿ ಡೇ

Spandana Vijay Raghavendra Love Story: ವಿಜಯ್​ ರಾಘವೇಂದ್ರಗೆ ಪತ್ನಿ ಸ್ಪಂದನಾ ಮೇಲೆ ಅಪಾರ ಪ್ರೀತಿ ಇತ್ತು. ಪತ್ನಿಯನ್ನು ಅವರು ಅತೀವವಾಗಿ ಪ್ರೀತಿಸುತ್ತಿದ್ದರು. ಈ ಬಗ್ಗೆ ವಿಜಯ್ ಅವರು ಅನೇಕ ಬಾರಿ ಹೇಳಿಕೊಂಡಿದ್ದಿದೆ.

ವಿಜಯ್-ಸ್ಪಂದನಾ ಪ್ರೇಮಕ್ಕೆ ಮುನ್ನಡಿ ಹಾಡಿತ್ತು ಮಲ್ಲೇಶ್ವರದ ಕಾಫಿ ಡೇ
ವಿಜಯ್-ಸ್ಪಂದನಾ
Follow us
ರಾಜೇಶ್ ದುಗ್ಗುಮನೆ
|

Updated on:Aug 07, 2023 | 11:56 AM

ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಭಾನುವಾರ (ಆಗಸ್ಟ್ 6) ನಿಧನ ಹೊಂದಿದ್ದಾರೆ. ಥೈಲ್ಯಾಂಡ್ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಉಂಟಾಗಿತ್ತು. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಕುಟುಂಬದವರಿಗೆ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. ಇವರು ಮದುವೆ ಆಗಿ 15 ವರ್ಷಗಳ ಮೇಲಾಗಿತ್ತು. ವಿಜಯ್ ಅವರಿಗೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಇವರ ಪ್ರೇಮ ವಿವಾಹ ಬಹಳ ಭಿನ್ನವಾಗಿದೆ.

ವಿಜಯ್​ಗೆ ಪತ್ನಿಯ ಮೇಲೆ ಅಪಾರ ಪ್ರೀತಿ ಇತ್ತು. ಪತ್ನಿಯನ್ನು ಅವರು ಅತೀವವಾಗಿ ಪ್ರೀತಿಸುತ್ತಿದ್ದರು. ‘2003ರಲ್ಲಿ ಮಲ್ಲೇಶ್ವರ ಕಾಫಿ ಡೇನಲ್ಲಿ ಮೊದಲು ಸ್ಪಂದನಾನ ನೋಡಿದ್ದೆ. ಅವಳನ್ನು ನೋಡಿದ ತಕ್ಷಣ ಇಷ್ಟ ಆಗೋಯ್ತು. ಆದರೆ, ಮಾತನಾಡಿಸುವ ಧೈರ್ಯ ಇರಲಿಲ್ಲ. ಬಳಿಕ 2006ರಲ್ಲಿ ಮತ್ತೆ ಇವಳನ್ನು ನೋಡಿದೆ. ನನಗೆ ಆಗಲೂ ಭಯ ಇತ್ತು. ಹೊರಗೆ ಹೋಗುವುದಕ್ಕೂ ಮೊದಲು ಅವಳ ಬಳಿ ಬಂದು ಮಾತನಾಡಿಸಿದೆ. ಆಗ ಹೆಸರನ್ನೂ ಕೇಳಿಲ್ಲ. ಬಳಿಕ ಸ್ಪಂದನಾ ಜಿಮ್​​ನಲ್ಲಿ ಸಿಕ್ಕಿದ್ಲು. ಸುತ್ತಾಡೋಕೆ ಭಯ ಆಗುತ್ತಿತ್ತು. ಹಾಗಾಗಿ ಸುಮ್ಮನಿದ್ದೆ. ಆ ಸಮಯದಲ್ಲಿ ನನಗೆ ಮದುವೆ ಮಾಡಲು ಮನೆಯವರು ಹುಡುಗಿ ನೋಡುತ್ತಿದ್ದರು. ಇನ್ನು ಬಿಟ್ಟರೆ ಆಗಲ್ಲ ಎಂದು ನಾನು ಬಂದು ತಂದೆಯವರಿಗೆ (ಚಿನ್ನೇ ಗೌಡ) ಈ ಬಗ್ಗೆ ಹೇಳಿದೆ. ಅಪ್ಪಾಜಿ ಖುಷಿಪಟ್ಟರು. ನಮ್ಮ ತಂದೆ ಹೋಗಿ ಸ್ಪಂದನಾ ತಂದೆ ಶಿವರಾಮ್ ಬಳಿ ಮಾತನಾಡಿದರು’ ಎಂದು ವಿಜಯ್ ರಾಘವೇಂದ್ರ ಹಳೆಯ ಕಥೆ ಹೇಳಿಕೊಂಡಿದ್ದರು.

ಶಿವರಾಮ್ ಹಾಗೂ ಚಿನ್ನೇ ಗೌಡ ಕುಟುಂಬದ ಮಧ್ಯೆ ಮೊದಲೇ ಪರಿಚಯ ಇತ್ತು. ಎರಡೂ ಕುಟುಂಬಕ್ಕೆ ಪರಿಚಯ ಇದ್ದಿದ್ದರಿಂದ ಮದುವೆ ಮಾತುಕತೆ ಮತ್ತಷ್ಟು ಸುಲಭವಾಯಿತು. ಚಿನ್ನೇ ಗೌಡರು ಇಟ್ಟ ಪ್ರಪೋಸಲ್​ನ ಶಿವರಾಮ್ ಅವರು ಒಪ್ಪಿದರು. ಶಿವರಾಮ್ ಮನೆಗೆ ಬಂದು ಚಿನ್ನೇ ಗೌಡರು ಹೆಣ್ಣು ಕೇಳಿದರು. ಎರಡೂ ಕುಟುಂಬದವರು ಒಪ್ಪಿದ ಬಳಿಕ ಮದುವೆ ನಡೆಯಿತು.

ಇದನ್ನೂ ಓದಿ: ವಿಧಿ ತುಂಬಾ ಕ್ರೂರ; ವಿವಾಹ ವಾರ್ಷಿಕೋತ್ಸವದ ಖುಷಿಯ ಹೊಸ್ತಿಲಲ್ಲಿದ್ದ ಸ್ಪಂದನಾ-ವಿಜಯ್ ರಾಘವೇಂದ್ರ

‘ನಾನು ಮದುವೆ ಆಗುವ ಹುಡುಗಿನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ನನ್ನ ಕನಸಾಗಿತ್ತು. ವಾತಾವರಣ ಕೆಡಿಸಲು ನನಗೆ ಇಷ್ಟ ಇಲ್ಲ. ಹೀಗಾಗಿ, ನಾನು ಜಗಳ ಮಾಡೋಕೆ ಹೋಗಲ್ಲ’ ಎಂದಿದ್ದರು ವಿಜಯ್. ಪತ್ನಿಯನ್ನು ಅವರು ಎಷ್ಟು ಪ್ರೀತಿಸುತ್ತಿದ್ದರು ಎಂಬುದಕ್ಕೆ ಇದೊಂದು ಚೆಂದದ ಉದಾಹರಣೆ.

2007ರ ಆಗಸ್ಟ್ 26ರಂದು ವಿಜಯ್ ಹಾಗೂ ಸ್ಪಂದನಾ ಹಸಮಣೆ ಏರಿದ್ದರು. ಇನ್ನು, 19 ದಿನ ಕಳೆದಿದ್ದರೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿತ್ತು. ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:51 am, Mon, 7 August 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ