ಆಟೋರಾಜ ಆದ ಪ್ರದೀಪ್ ಈಶ್ವರ್, ಆಟೋ ಚಾಲಕರಿಗೆ ಧನಸಹಾಯ ಮಾಡಿ ಮಾನವೀಯತೆ ಮೆರೆದ ಶಾಸಕ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಸಕ ಪ್ರದೀಶ್ ಈಶ್ವರ್ ಅವರು ಕ್ಷೇತ್ರದ ಮಹಿಳೆಯರಿಗೆ ಸೀರೆಯನ್ನು ನೀಡುತ್ತಿದ್ದಾರೆ. ಇದರ ಮಧ್ಯೆ ಆಟೋ ಚಾಲಕರಿಗೂ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಬಳ್ಳೂರ, (ಜುಲೈ 30): ಒಂದಲ್ಲ ಒಂದು ವಿಚಾರಕ್ಕೆ ಭಾರೀ ಸದ್ದು ಮಾಡುತ್ತಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಆಟೋ ಚಾಲಕರಿಗೆ ಸಹಾಯಧನ ಮಾಡಿದ್ದಾರೆ. ಇಂದು (ಜುಲೈ 30) ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಸ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋ ಚಾಲಕರ ಕುಟುಂಬಕ್ಕೆ ತಲಾ 5 ಸಾವಿರ ರೂಪಾಯಿ ಧನಸಹಾಯ ಮಾಡಿ ಮಾನವೀಯತೆ ಮೆರೆದರು. ನಗರದಲ್ಲಿರುವ ಎಲ್ಲಾ ನೂರಾರು ಆಟೋ ಚಾಲಕರಿಗೆ 5 ಸಾವಿರ ರೂಪಾಯಿ ಧನಸಹಾಯ ಮಾಡಿದ್ದು, ಪ್ರತಿವರ್ಷ ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಈ ಧನಸಹಾಯವನ್ನು ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸುವಂತೆ ಕರೆ ನೀಡಿದರು. ಇನ್ನು ಇದೇ ವೇಳೆ ಪ್ರದೀಶ್ ಈಶ್ವರ್ ಆಟೋ ಓಡಿಸಿ ಆಟೋರಾಜ ಆಗಿದ್ದಾರೆ.
Published on: Jul 30, 2023 03:05 PM