ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿ ಗಮನಸೆಳೆದ ಶಿವಲಿಂಗೇಗೌಡ, ವಿಡಿಯೋ ನೋಡಿ

Edited By:

Updated on: Nov 06, 2023 | 8:33 AM

ಅರಸೀಕೆರೆ ಕಾಂಗ್ರೆಸ್ ಶಾಸಕ ಶಾಸಕ ಶಿವಲಿಂಗೇಗೌಡ ಅವರು ರೈತರ ಜೊತೆ ತರಕಾರಿ ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಗಮನಸೆಳೆದಿದ್ದಾರೆ.

ಹಾಸನ, (ನವೆಂಬರ್ 06): ಅರಸೀಕೆರೆ ಕಾಂಗ್ರೆಸ್ ಶಾಸಕ ಶಾಸಕ ಶಿವಲಿಂಗೇಗೌಡ (Congress MLA Shivalinge Gowda ) ಅವರು ರೈತರ ಜೊತೆ ತರಕಾರಿ ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಗಮನಸೆಳೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅರಸೀಕೆರೆ ನಗರದ ಹೊರ ವಲಯದಲ್ಲಿರುವ ಗೀಜಿಹಳ್ಳಿ ಕೃಷಿ ಮಾರುಕಟ್ಟೆ ನೂತನ ಪ್ರಾಂಗಣ ಉದ್ಘಾಟನೆ ಮಾಡಿ ಬಳಿಕ ಟೊಮ್ಯಾಟೊ ಹರಾಜಿನಲ್ಲಿ ಭಾಗವಹಿಸಿದ್ದಾರೆ. ರೈತರಿಗೆ ಉತ್ತೇಜನ ನೀಡೋ ಸಲುವಾಗಿ ತಾವೇ ಖುದ್ದು ತರಕಾರಿ ಹರಾಜಿನಲ್ಲಿ ಭಾಗಿಯಾದ ಶಿವಲಿಂಗೇಗೌಡ್ರು, ನೂರು ,ನೂರೈವತ್ತು, ನೂರೆಂಬತ್ತು ಎಂದು ಹರಾಜು ಕೂಗಿ ಟೊಮೆಟೊ ಮಾರಾಟ ಮಾಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 06, 2023 08:31 AM
Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More