Lungi Factor: ಕಾಂಗ್ರೆಸ್ ಮೊದಲು ಇಟಲಿ ರಾಜಮಾತೆ ಸೆರಗಿನಿಂದ ಹೊರ ಬರಲಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ
ಕಾಂಗ್ರೆಸ್ ಮೊದಲು ಇಟಲಿ ರಾಜಮಾತೆ ಸೆರಗಿನಿಂದ ಹೊರ ಬರಲಿ. ಮೊದಲು ಕಾಂಗ್ರೆಸ್ಸಿಗರು ತಮ್ಮ ಪಂಚೆ ಗಟ್ಟಿಯಾಗಿ ಇಟ್ಟುಕೊಳ್ಳಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಕಾಂಗ್ರೆಸ್ (Congress) ಮೊದಲು ಇಟಲಿ ರಾಜಮಾತೆ (Italy royal mother) ಸೆರಗಿನಿಂದ ಹೊರ ಬರಲಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginkai) ಹೇಳಿದ್ದಾರೆ. ಮೊದಲು ಕಾಂಗ್ರೆಸ್ಸಿಗರು ತಮ್ಮ ಪಂಚೆ ಗಟ್ಟಿಯಾಗಿ ಇಟ್ಟುಕೊಳ್ಳಿ. ಈ ಹಿಂದೆ ಕೆಲವು ಸಲ ನಿಮ್ಮ ಪಂಚೆ ಕಳಚಿತ್ತು ಎಂದು ಟೆಂಗಿನಕಾಯಿ ಹೇಳಿದರು. ಪಂಚೆ ಸರಿ ಮಾಡ್ಕೊಳ್ಳಿ ಎಂದು ಹೇಳಿದ್ದನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ನವರು ಗ್ಯಾರಂಟಿ ಜಾರಿ ಮಾಡದೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಏನೇ ಮಾಡಿದ್ರೂ ಕೌಂಟರ್ ಅಟ್ಯಾಕ್ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ (BJP MLA from Hubballi) ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.