Karnataka Assembly Polls: ಕಾಂಗ್ರೆಸ್ ಏನೇ ಕಸರತ್ತು ನಡೆಸಿದರೂ ಸರ್ಕಾರ ರಚನೆ ಮಾಡಲ್ಲ, ಬಿಜೆಪಿಯೇ ಅಧಿಕಾರಕ್ಕೆ ಬರೋದು: ಆರ್ ಅಶೋಕ

|

Updated on: May 11, 2023 | 4:18 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಱಲಿಗಳನ್ನು ನಡೆಸಿದ ಬಳಿಕ ಮತದಾರರ ಒಲವು ಬಿಜೆಪಿ ಕಡೆ ತಿರುಗಿದೆ ಮತ್ತು ತಮ್ಮ ಪಕ್ಷವೇ ಸರ್ಕಾರ ರಚಿಸಲಿದೆಯೆಂದು ಅಶೋಕ ಹೇಳಿದರು.

ಬೆಂಗಳೂರು: ಕರ್ನಾಟಕ ವಿಧಾನಾಸಭಾ ಚುನಾವಣೆ ಭಾಗವಾಗಿ ಮತದಾನ ಕೊನೆಗೊಂಡ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಅವರೇನೆ ಮಾಡಿದರೂ ವ್ಯರ್ಥ, ಯಾಕೆಂದರೆ ಅವರು ತಿಪ್ಪರಲಾಗ ಹೊಡೆದರೂ ಸರ್ಕಾರ ರಚನೆ ಮಾಡಲ್ಲ ಎಂದು ಪದ್ಮನಾಭನಗರ (Padmanabhanagar) ಹಾಗೂ ಕನಕಪುರ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಸಚಿವ ಆರ್ ಆಶೋಕ (R Ashoka) ಹೇಳಿದರು. ನಗರದ ತಮ್ಮ ನಿವಾಸದಲ್ಲಿಂದು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಸಚಿವರು ಮತಗಟ್ಟೆ ಸಮೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಱಲಿಗಳನ್ನು ನಡೆಸಿದ ಬಳಿಕ ಮತದಾರರ ಒಲವು ಬಿಜೆಪಿ ಕಡೆ ತಿರುಗಿದೆ ಮತ್ತು ತಮ್ಮ ಪಕ್ಷವೇ ಸರ್ಕಾರ ರಚಿಸಲಿದೆಯೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ