AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lokayukta raid in Gadag: ಗುತ್ತಿಗೆದಾರರೊಬ್ಬರಿಂದ ಪಡೆದ ಲಂಚದ ಹಣವನ್ನು ಗದಗ ನಗರಸಭೆಯ ಇಂಜಿನೀಯರ್ ಬೈಕ್ ಡಿಕ್ಕಿಯಲ್ಲಿಟ್ಟಿದ್ದರು!

Lokayukta raid in Gadag: ಗುತ್ತಿಗೆದಾರರೊಬ್ಬರಿಂದ ಪಡೆದ ಲಂಚದ ಹಣವನ್ನು ಗದಗ ನಗರಸಭೆಯ ಇಂಜಿನೀಯರ್ ಬೈಕ್ ಡಿಕ್ಕಿಯಲ್ಲಿಟ್ಟಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on:May 11, 2023 | 6:56 PM

Share

ಲಂಚದ ಹಣವನ್ನು ಅವರು ತಮ್ಮ ಬೈಕ್ ನ ಲಗ್ಗೇಜ್ ಬ್ಯಾಗ್ ನಲ್ಲಿ ಅನಾಮತ್ತಾಗಿ ಇಟ್ಟಿದ್ದರು. ಹಣಕ್ಕೆ ಯಾವ ಸುರಕ್ಷತೆಯೂ ಇರಲಿಲ್ಲ.

ಗದಗ-ಬೆಟಗೇರಿ ನಗರಸಭೆಯಲ್ಲಿ ಸಹಾಯಕ ಇಂಜಿನೀಯರ್ (assistant engineer) ಆಗಿ ಕೆಲಸ ಮಾಡುವ ಇಬ್ರಾಹಿಂ ಕಾಟೇವಾಲಾ (Ibrahim Katewala) ಬಿಲ್ ಗಳನ್ನು ಪಾಸ್ ಮಾಡಲು ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಬ್ದುಲ್ ಮನಿಯಾರ್ (Abdul Maniyar) ಹೆಸರಿನ ಗುತ್ತಿಗೆದಾರರ ಒಟ್ಟು 9 ಲಕ್ಷ ಮೌಲ್ಯದ 3 ಬಿಲ್ ಗಳನ್ನು ಪಾಸು ಮಾಡಲು ಒಂದೂವರೆ ಲಕ್ಷ ರೂ. ಲಂಚ ಸ್ವೀಕರಿಸುವಾಗ ಇಬ್ರಾಹಿಂ ಸಿಕ್ಹಾಕಿಕೊಂಡಿದ್ದಾರೆ. ಲಂಚದ ಹಣವನ್ನು ಅವರು ತಮ್ಮ ಬೈಕ್ ನ ಲಗ್ಗೇಜ್ ಬ್ಯಾಗ್ ನಲ್ಲಿ ಅನಾಮತ್ತಾಗಿ ಇಟ್ಟಿದ್ದರು. ಹಣಕ್ಕೆ ಯಾವ ಸುರಕ್ಷತೆಯೂ ಇರಲಿಲ್ಲ. ಬೆವರು ಸುರಿಸಿ ದುಡಿದ ಸಂಪಾದನೆಯಾದರೆ ಜತನದಿಂದ ಸುರಕ್ಷಿತವಾದ ಸ್ಥಳದಲ್ಲಿ ಜನ ಇಡುತ್ತಾರೆ. ಆದರೆ ಇಬ್ರಾಹಿ ಸಿಕ್ಕಿದ್ದು ಬಿಟ್ಟಿ ಹಣ ಹಾಗಾಗೇ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ. ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: May 11, 2023 05:43 PM