ಲೋಕಸಭಾ ಚುನಾವಣೆ ಸಮಯದಲ್ಲಿ ನನ್ನನ್ನು ಜೇಲ್ನಲ್ಲಿಡುವ ಷಡ್ಯಂತ್ರ ನಡೆದಿದೆ: ಮುನಿರತ್ನ ನಾಯ್ಡು, ಶಾಸಕ
ತಿಹಾರ್ ಜೈಲಿಗಂತೂ ತನ್ನನ್ನು ಕಳಿಸಲಾಗಲ್ಲ, ಲೋಕಲ್ ಕಾರಾಗೃಹಗಳಿಗೆ ಅಟ್ಟುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದ ಮುನಿರತ್ನ ತನ್ನ ಕಚೇರಿಯ ಆಸುಪಾಸಿನಲ್ಲಿ ಯಾವುದಾದರೂ ಅಪಘಾತ ನಡೆದರೂ ನಿಶ್ಚಿತವಾಗಿ ತನ್ನ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದರು
ಬೆಂಗಳೂರು: ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ (Pratima murder case) ಸುಖಾಸುಮ್ಮನೆ, ದುರುದ್ದೇಶಪೂರ್ವಕ, ರಾಜಕೀಯ ಕಾರಣ ಮತ್ತು ತೆಜೋವಧೆ ಮಾಡಲು ತನ್ನ ಹೆಸರನ್ನು ಥಳುಕು ಹಾಕುವ ಪ್ರಯತ್ನ ನಡೆದಿದೆ, ಪ್ರಕರಣ ತನಿಖೆ ಜಾರಿಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಯಾವುದೇ ಹೇಳಿಕೆ ತಪ್ಪಾಗುತ್ತದೆ, ತನಿಖೆ ಪೂರ್ಣಗೊಂಡ ಬಳಿಕ ತನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದ ಪ್ರತಿಯೊಬ್ಬನಿಗೆ ತಕ್ಕ ಉತ್ತರ ನೀಡುವುದಾಗಿ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು (Munirathna Naidu) ಹೇಳಿದರು. ತಮ್ಮ ಕಚೇರಿಯಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಶಾಸಕ ಮುನಿರತ್ನ ಲೋಕಸಭಾ ಚುನಾವಣೆ (Lok Sabha polls) ಸಂದರ್ಭದಲ್ಲಿ ತಾನು ಕ್ಷೇತ್ರದಲ್ಲಿರೋದು ಕೆಲವರಿಗೆ ಬೇಕಿಲ್ಲ, ಹಾಗಾಗೇ ಜೈಲಿಗೆ ಕಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು. ತಿಹಾರ್ ಜೈಲಿಗಂತೂ ತನ್ನನ್ನು ಕಳಿಸಲಾಗಲ್ಲ, ಲೋಕಲ್ ಕಾರಾಗೃಹಗಳಿಗೆ ಅಟ್ಟುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದ ಮುನಿರತ್ನ ತನ್ನ ಕಚೇರಿಯ ಆಸುಪಾಸಿನಲ್ಲಿ ಯಾವುದಾದರೂ ಅಪಘಾತ ನಡೆದರೂ ನಿಶ್ಚಿತವಾಗಿ ತನ್ನ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ