ಮುಖ್ಯಮಂತ್ರಿಯಾಗಿದ್ದಾಗ ನನ್ನ ಚೇಂಬರ್ನಲ್ಲಿ ಯಾವತ್ತೂ ಕಮೀಶನ್ ವ್ಯವಹಾರ ನಡೆದಿಲ್ಲ: ಕುಮಾರಸ್ವಾಮಿ
ಕೆಂಪಣ್ಣನವರು ಎಲ್ಲರ ಕಾಲದಲ್ಲೂ ನಡೆದುಕೊಂಡು ಬಂದಿದೆ ಅಂತ ಹೇಳಿದ್ದಾರೆ, ಅವರು ನನ್ನ ಮುಂದೆ ಈ ಮಾರು ಹೇಳಲಿ ಅಂತ ಸವಾಲು ಹಾಕಿದರು.
Devanahalli: ತಾವು ಮುಖ್ಯಮಂತ್ರಿಯಾಗಿದ್ದಾಗಲೂ ಬಿಲ್ ಗಳನ್ನು ಪಾಸು ಮಾಡಲು 5 ಪರ್ಸೆಂಟ್ ಕಮೀಶನ್ ಪಡೆಯಲಾಗುತ್ತಿತ್ತು ಎಂಬ ಆರೋಪವನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ತಳ್ಳಿಹಾಕಿದರು. ದೇವನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿಯವರು ತಾವು ಎರಡು ಅವಧಿಗಳಿಗೆ ಅಧಿಕಾರದಲ್ಲಿದ್ದಾಗ ತಮ್ಮ ಕಚೇರಿಯಲ್ಲಿ ಯಾವತ್ತೂ ಕಮೀಷನ್ ನಡೆದಿಲ್ಲ, ಕೆಂಪಣ್ಣನವರು ಎಲ್ಲರ ಕಾಲದಲ್ಲೂ ನಡೆದುಕೊಂಡು ಬಂದಿದೆ ಅಂತ ಹೇಳಿದ್ದಾರೆ, ಅವರು ನನ್ನ ಮುಂದೆ ಈ ಮಾರು ಹೇಳಲಿ ಅಂತ ಸವಾಲು ಹಾಕಿದರು.